ನಾಯಕರು ಹುಟ್ಟಿದ್ದು (೧೯೬೦) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಾಸರೆಯಲ್ಲಿ. ಅಂಕೋಲೆಯ ಶೈಕ್ಷಣಿಕ ಪರಿಸರದಲ್ಲಿ ‘ಕಾಂತಾ ಮಾಸ್ತರ’ ಎಂದೇ ಪರಿಚಿತರಾಗಿರುವ ನಾಯಕರು ಸ್ವಾತಂತ್ರö್ಯ ಹೋರಾಟಗಾರರ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ತಮ್ಮ ಹುಟ್ಟೂರಿನ ಕುರಿತು ‘ವಾಸರೆ ಕುದ್ರಿಗೆ’ ಎಂಬ ಭೌಗೋಳಿಕ ಅಧ್ಯಯನ ಗ್ರಂಥವನ್ನು ರಚಿಸಿದ್ದಾರೆ. ಕತೆ, ಕಾವ್ಯ ರಚನೆಯಲ್ಲಿ ಗ್ರಾಮ್ಯ ಭಾಷೆಯ ಸೊಗಡನ್ನು ಬಹು ಸ್ವಾರಸ್ಯಕರವಾಗಿ ಬಳಸಿಕೊಂಡು ಜನಪದ ಸಿರಿವಂತಿಕೆಯ ತಾಜಾತನವನ್ನು ಆಪ್ತವಾಗಿ ಕಟ್ಟಿಕೊಡುವ ಇವರ ಕೆಲವು ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ, ಅಂಕೋಲೆಯ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ, ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ, ಅಂಕೋಲಾ ಅರ್ಬನ್ ಬ್ಯಾಂಕ್ನ ನಿರ್ದೇಶಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು: ವಾಸರ ಕುದ್ರಿಗೆ (ಅಧ್ಯಯನ), ಗಾನದ ಹುಟ್ಟು (ಮಕ್ಕಳ ಕವನ ಸಂಕಲನ), ಜಂತ್ರೋಡಿ (ಕಥಾ ಸಂಕಲನ), ಪಾತಿ ದೋಣಿ (ಕವನ ಸಂಕಲನ), ಹಾಯಿದೋಣಿ (ಕವನ ಸಂಕಲನ), ಗಂಗಾಮೃತ (ಸಂಪಾದಿತ), ನಾಡವರ ಸಂಘದ ಶತಕ ಸಂಭ್ರಮ (ಸಂಪಾದಿತ) ಪ್ರಕಟಗೊಂಡಿವೆ. ಸದ್ಯ ಅಂಕೋಲಾದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.