About the Author

ಮಕ್ಕಳ ಸಾಹಿತಿ ವಸಂತಮಾಲಾ ಜಿ. ಎಸ್. ಅವರು ಜಾನಪದದಲ್ಲಿ ಅತ್ಯಂತ ಆಸ್ಥೆ ಉಳ್ಳವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಧರೆ. 1949 ಆಗಸ್ಟ್ 13 ಹಾಸನದಲ್ಲಿ ಜನಿಸಿದರು.  ತಂದೆ ಶೆಟ್ಟಪ್ಪ, ತಾಯಿ ಜಿ.ವಿ. ಸುಶೀಲಾದೇವಿ. ‘ಅರ್ಚನಾ, ಭಾವಪೂಜೆ, ಅಕಿಂಚನ’ ಅವರ ಸಣ್ಣ ಕತೆಗಳು. ‘ಎರಡು ಕಿನ್ನರಿ ಜೋಗಿ ಕಾವ್ಯಗಳು, ಜನಪದ ಗೀತೆಗಳಲ್ಲಿ ಬಾಹುಬಲಿ’ ಅವರ ಜಾನಪದ ಕೃತಿಗಳು. ‘ಚಿಣ್ಣರಿಗೆ ಜಾಣ್ಂಎಯ ಕಥೆಗಳು’ - ಅವರ ಮಕ್ಕಳ ಸಾಹಿತ್ಯ.  ‘ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಪ್ರಶಸ್ತಿ, ಜೈನ ಗ್ರಂಥ ಪ್ರಶಸ್ತಿ’ ಮುಂತಾದ ಪ್ರಶಸ್‌ತಿಗಳು ಲಭಿಸಿವೆ.

 

ಜಿ.ಎಸ್. ವಸಂತಮಾಲಾ