ಲೇಖಕ ಡಿ. ರಾಮನಮಲಿ ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯವರು. (ಜನನ:1950 ಜುಲೈ 01) ತಂದೆ ಡಿ. ಕಾಶೀಂ ಸಾಹೇಬ್, ತಾಯಿ - ಸಾಕುಮಾಬಿ. ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ (2008) ಸಹಾಯಕರಾಗಿ ನಿವೃತ್ತಿ. ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ನೆಲೆಸಿದ್ದು, 1998ರಲ್ಲಿ ‘ಋತುಮಾನ’ ಕವನ ಸಂಕಲನ ಪ್ರಕಟಿಸಿದರು. ‘ಕಾಳವ್ವನ ಕೋಳಿ’ (ಕತಾ ಸಂಕಲನ), ಮೊಬೈಲ್ ಎಂಬ ಮೋಹಿನಿ (ಪ್ರಬಂಧ ಸಂಕಲನ), ಬಿಸ್ಟಪ್ಪ ಸಾಲ್ಮನಿ (ಜೀವನ ಮತ್ತು ಸಾಧನೆ), ಭಾಗ (ಕತಾ ಸಂಕಲನ), ಕನ್ನಡ ಶಾಯಿರಿಗಳು, ಇವು ನನ್ನವಲ್ಲ (ಲೇಖನಗಳ ಸಂಪಾದನೆ), ಪುಷ್ಪಾಂಜಲಿ ಅನುವಾದಿತ ಕತೆಗಳು ಅವರ ಪ್ರಕಟಿತ ಕೃತಿಗಳು. ಅವರಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ತೆಂಗಿನಮಠಶ್ರೀ ಪ್ರಶಸ್ತಿ, ವಿಶ್ವೇಶ್ವರ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ.