ಚನ್ನಮಲ್ಲಪ್ಪ ಗಂಗಪ್ಪ ಕರಡಿ ಅವರು ಕರಡಿ ಮಜಲು ಕಲೆಯನ್ನು ಕರಗತವಾಗಿಸಿಕೊಂಡವರು. 980ರ ಜುಲೈ 22 ರಂದು ಜನನ. ತಂದೆ ಗಂಗಪ್ಪ ತಾಯಿ ಕಲ್ಲವ್ವ. ಕರಡಿ ಮಜಲು ಕಲೆಯನ್ನು ತಂದೆ ಗಂಗಪ್ಪ, ದೊಡ್ಡಪ್ಪ ಮಡಿವಾಳಪ್ಪ ಹಾಗೂ ಅಶೋಕ ಚ. ಕರಡಿ ಅವರಲ್ಲಿ ಕಲಿತರು. ನಂತರ ದೆಹಲಿಯಲ್ಲಿ ಹಾಗೂ ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಿದ್ದಾರೆ. ಕರಡಿ ಮನೆತನ ಭಾಗವಹಿಸುವ ಎಲ್ಲ ಉತ್ಸವ, ಜಾತ್ರೆಗಳಲ್ಲಿ ಇವರ ಪ್ರದರ್ಶನ ನೀಡುತ್ತಾರೆ.ಇವರ `ಕರಡಿ ಮಜಲು' ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.