ಡಾ. ಬಲಭೀಮ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಗೌರಮ್ಮ.ಗುಲಬಗಾ ವಿ.ವಿ.ಯಿಂದ ಬಿ.ಇಡಿ ಪದವೀಧರರು. ಕರ್ನಾಟಕ ಕೇಂದ್ರೀಯ ವಿ.ವಿ.ಯಿಂದ ಎಂ.ಎ. (ಕನ್ನಡ) ಹಾಗೂ ಕುವೆಂಪು ವಿ.ವಿ.ಯಿಂದ ‘ಡಾ.ಎಚ್. ಗಿರಿಜಮ್ಮ ಅವರ ಸಾಹಿತ್ಯ: ಸ್ತ್ರೀ ಸಂವೇದನೆಯ ನೆಲೆ’ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ. ಸದ್ಯ, ಅಥಣಿಯ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಅತಿಥಿ ಉಪನ್ಯಾಸಕರು.
ಇವರ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಷ್ಟ್ರೀಯ -ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಉಪನ್ಯಾಸಗಳನ್ನು ಮಂಡಿಸಿದ್ದಾರೆ. ಮಹಿಳಾ ಸಂವೇದನೆ-ವಿಮರ್ಶಾ ಲೇಖನಗಳ ಸಂಗ್ರಹ ಕೃತಿ.