ಕವಯತ್ರಿ ಯಮುನಾ ಗಾಂವ್ಕರ್, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಗ್ರಾಮದವರು. 1975 ಫೆಬ್ರುವರಿ 01 ರಂದು ಜನನ. ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದು, ವೃತ್ತಿಯಿಂದ ವಕೀಲರು. ಜನಶಕ್ತಿ, ಕರಾವಳಿ ಮುಂಜಾವು, ವಿಜಯ ಕರ್ನಾಟಕ, ಸಮಾಜಮುಖಿ, ಲೋಕಧ್ವನಿ ಮುಂತಾದ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಸುತ್ತಮುತ್ತ ಒಂದು ಸುತ್ತು- ವಿವಿಧ ಲೇಖನಗಳ ಸಂಕಲನ, ಜನದನಿ (ಹೋರಾಟದ ಹಾಡುಗಳ ಸಂಪಾದನೆ), ನಿಜದನಿ (ಹೋರಾಟದ ಹಾಡುಗಳ ಸಂಪಾದನೆ), ಉಯಿಲಿಗೆ ಸಹಿ ಹಾಕಿ (ಕವನ ಸಂಕಲನ), ಅಬ್ಬೆ ಮಡಿಲು (ಕವನ ಸಂಕಲನ), ಜೋಯ್ಡಾ: ಕಾಡೊಳಗಿನ ಒಡಲು (ಮಾನವಿಕ ಅಧ್ಯಯನ ಗ್ರಂಥ) - ಅವರ ಕೃತಿಗಳು. ’ನಿನ್ನ ದಾಖಲೆ ಯಾವಾಗ ನೀಡುತ್ತೀ?’ ಕವನ ಸಂಕಲನ ಅವರ ಸಂಪಾದಿತ ಕೃತಿ.