ಲೇಖಕಿ ವೈ.ಸಿ. ಭಾನುಮತಿಯವರು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದವರು. ವೈ.ಸಿ. ಭಾನುಮತಿಯವರು ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಗ್ರಂಥ ಸಂಪಾದನೆ ಜೊತೆಗೆ ಸಂಶೋಧನ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಜೈನ ಕವಿ ಶ್ರುತಕೀರ್ತಿಯ ಸ್ರ್ತೀಯೋರ್ವಳ ಕತೆಯನ್ನು ಆಧರಿಸಿ ರಚಿಸಿದ ಮೊದಲ ಜೈನ ಕೃತಿ ವಿಜಯ ಕುಮಾರಿ ಚರಿತೆ, ಸುಕುಮಾರ ಚರಿತೆ, ಪುರಾತನರರ ಚರಿತೆ ಮತ್ತು ಶರಣ ನಿಜಚಿಕ್ಕಲಿಂಗಯ್ಯ ಸಾಂಗತ್ಯ ಸೇರಿದಂತೆ ಸುಮಾರು 30 ಮಹತ್ವದ ಗ್ರಂಥಗಳನ್ನು ಸಂಪಾದಿಸಿದ್ದಾರೆ.
ಜಾನಪದ ಕ್ಷೇತ್ರದಲ್ಲಿಯೂ ಆಸಕ್ತರಾಗಿದ್ದ ಅವರು ಇಬ್ಬೀಡಿನ ಜನಪದ ಕಥೆಗಳು, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ಜಾನಪದ ಭಿತ್ತಿ, ಜನಪದ ಅಡುಗೆ, ಮಕ್ಕಳ ಹಾಡುಗಳು, ಚಂದ್ರಹಾಸನ ಕಥೆ(ನಾಟಕ) ಸೇರಿದಂತೆ ಸುಮಾರು 11 ಜಾನಪದೀಯ ಕೃತಿಗಳನ್ನು ಸಂಪಾದಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಗಾಗಿ ಹಲವಾರು ಗೌರವ ಪ್ರಶಸ್ತಿಗಳನ್ನು ವೈ.ಸಿ. ಭಾನುಮತಿಯವರು ಪಡೆದಿದ್ದಾರೆ.