ವೀರಭದ್ರ ಚನ್ನಮಲ್ಲ ಸ್ವಾಮಿ ಅವರು ಜನಿಸಿದ್ದು 1960 ಜೂನ್ 1ರಂದು ಚಿತ್ರದುಗದಲ್ಲಿ. ನಿಡುಮಾಮಿಡಿ ಮಠದ ಮಠಾಧೀಶರಾಗಿರುವ ಇವರು ವೈಚಾರಿಕ ಚಿಂತನೆ, ಕಾವ್ಯ, ಪ್ರಬಂಧ, ಸಂಪಾದನೆ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಪ್ರಮುಖ ಕೃತಿಗಳೆಂದರೆ ಸುಳ್ಳು ಸೃಷ್ಟಿಗಳು, ಅಂತರ, ಕನ್ನಡದ ಬನ ವಚನಾಂಜಲಿ, ಮಣ್ಣು ಮುಗಿಲು ( ಕಾವ್ಯ), ವ್ಯಾಸಂಗ (ಪ್ರಬಂಧ): ನೆನಹುನಮನ, ಸ್ವಾತಂತ್ರ್ಯ ಸೂರ್ಯ ಜಚನಿ, (ಸಂಪಾದನೆ) ಶಿವಸಂಸ್ಕೃತಿ ಒಂದು ಚಿಂತನೆ, ಮಠಾಧೀಶರ ಮರ್ಮ, ಪಂಚಾಚಾರ್ಯರ ಪೂರ್ವಗ್ರಹಗಳು; ಒಲವು - ನಿಲುವು, ಸಹಜ ಜೀವಿಗಳು (ವೈಚಾರಿಕ ಲೇಖನಗಳು) ಮುಂತಾದವು.