ಲೇಖಕ, ರಂಗಕರ್ಮಿ, ಕಲಾವಿದ ಸುಧೀರ್ ಅತ್ತಾವರ್ ಅವರು ಬಕಾವಲಿ ಹೂ ಎಂಬ ಕೃತಿಯನ್ನು ರಚಿಸಿದ್ದಾರೆ. ಆಧುನಿಕ ಶೈಲಿಯ ಒಂದು ಸಮಕಾಲೀನ ಸಂಗೀತ ನಾಟಕ 'ಬಕಾವಲಿ ಹೂ'. ಈ ನಾಟಕದ ವಸ್ತು 'ಗುಲ್ ಎ ಬಕಾವಲಿ' ಕಥಾನಕವನ್ನು ಕನ್ನಡ ನಾಟಕ ರೂಪಕ್ಕಿಳಿಸಿದ್ದಾರೆ. ಅವರ ಹುಟ್ಟೂರು ಅತ್ತಾವರ್. ಎಂಜಿನಿಯರಿಂಗ್ ಪದವೀಧರರು. ಸಿರಿಸಂಪಿಗೆ, ಕ್ರಾಂತಿ ಬಂತು ಕ್ರಾಂತಿ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ಸಾಕ್ಷ್ಯಚಿತ್ರ-ಕಿರುಚಿತ್ರಗಳನ್ನೂ ನಿರ್ಮಿಸಿದ್ದು, ಚಲನಚಿತ್ರ ಗೀತ ರಚನಾಕಾರರು ಆಗಿದ್ದಾರೆ. ಇವರ ‘ಪ್ಯಾರಿ’ ಮೊದಲು ನಿರ್ದೇಶಿಸಿದ ಚಿತ್ರ. ಇವರ ‘ಬಕಾವಲಿಯ ಹೂ’ ನಾಟಕ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು (2016) ಅತ್ಯುತ್ತಮ ಕೃತಿ ಎಂದು ಪುಸ್ತಕ ಬಹುಮಾನ ನೀಡಿ ಗೌರವಿಸಿದೆ.