ಸುಮಾ ಕಾಟ್ಕರ್ ಮೂಲತಃ ಗುಜರಾತಿನವರು.ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗುಜರಾತಿ ಭಾಷೆಯಲ್ಲಿ ಮುಗಿಸಿದವರು .ಅಹಮ್ಮದಾಬಾದಲ್ಲಿ ಕಾಲೇಜು ಶಿಕ್ಷಣ ಪಡೆದರು. ಪತ್ರಕರ್ತ, ಸಾಹಿತಿ ಡಾ ಸರಜೂ ಕಾಟ್ಕರ್ ಅವರನ್ನು ಮದುವೆಯಾದ ನಂತರ ಕರ್ನಾಟಕಕ್ಕೆ ಬಂದ ಅವರು ಕನ್ನಡವನ್ನು ಕಲಿತು ಕನ್ನಡದಲ್ಲಿ 'ಸುಮಾ ರಾವ್ ' ಎಂಬ ಹೆಸರಿನಲ್ಲಿ ಅನೇಕ ಲೇಖನ ಗಳನ್ನು ಬರೆದರು. ಅವು 'ತರಂಗ ' ವಾರ ಪತ್ರಿಕೆ ಯಲ್ಲಿ ಪ್ರಕಟವಾದವು. ಬೆಳಗಾವಿ ಯಲ್ಲಿ ಕನ್ನಡ ಮಹಿಳಾ ಕೂಟ ಕಟ್ಟಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದಾರೆ. 'ಸಾವಿತ್ರಿಬಾಯಿ ಫುಲೆ ' ಚಲನಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.