ಲೇಖಕಿ ಸುಜಾತಾ ಚಲವಾದಿ ಅವರು ತಾಳಿಕೋಟಿಯ ಎಸ್.ಕೆ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ.ತಂದೆ ಚಂದಪ್ಪ , ತಾಯಿ ಚನ್ನಬಸಮ್ಮ. "ಕೊರಗು,ಕಾವ್ಯ,ಅನುರಣನ' ವಿಮರ್ಶಾ ಲೇಖನಗಳ ಕೃತಿ ಪ್ರಕಟಣೆ ಹಾಗೂ ಮುಂಬೈ ಕರ್ನಾಟಕದ " ಮಹಿಳಾ ಕಾದಂಬರಿಗಳು,: ಒಂದು ಅಧ್ಯಯನ,’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ ವಿ ಡಾಕ್ಟರೇಟ್ ಪದವಿ ನೀಡಿದೆ. ಅಚಲ ತ್ರೈಮಾಸಿಕ ಪತ್ರಿಕೆಯ ಸಹ ಸಂಪಾದಕಿಯೂ ಆಗಿದ್ದಾರೆ.
ನಾಡಿನ ವಿವಿಧ ಸಂಘ ಸಂಸ್ಥೆಗಳು ನೀಡಿದ ಅತ್ಯುತ್ತಮ ಯುವ ವಿಜ್ಞಾನಿ, ಸಾಹಿತ್ಯ ಸಿರಿ, ಸಿದ್ಧ ಸಿರಿ' ರವೀಂದ್ರನಾಥ ಟ್ಯಾಗೋರ್ ರಾಷ್ಟೀಯ ಪ್ರಶಸ್ತಿ,,ಡಾ ಬಿ ಆರ್.ಅಂಬೇಡ್ಕರ್ ರತ್ನ ಪ್ರಶಸ್ತಿ,ಕರವೇ ಬೆಂಗಳೂರು ಅವರಿಂದ ರಾಜ್ಯೋತ್ಸವ ಪ್ರಶಸ್ತಿ,ಕರ್ನಾಟಕ ಸಾಂಸ್ಕೃತಿಕ ರತ್ನ,ಅತ್ಯುತ್ತಮ ಪ್ರಬಂಧ ಮಂಡನೆಗಾಗಿ,ರಾಷ್ಟ್ರಕೂಟ ಅಲ್ಲದೆ ಭೀಮಜ್ಯೋತಿ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.ಗಳು ಲಭಿಸಿವೆ.