ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ. ಬೇರುಗಳಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಓದಿದ್ದು ಇಂಜಿನಿಯರಿಂಗ್. ಆಸಕ್ತಿ ಸಾಹಿತ್ಯ ಮತ್ತು ಪತ್ರಿಕೋದ್ಯಮ. ಚೆನ್ನೈ, ಬೆಂಗಳೂರು, ಅಮೆರಿಕದ ಸಿನ್ಸಿನಾಟಿ, ಚಿಕಾಗೋ ನಗರಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ನಡೆಸಿದ ಅನುಭವ. ಸೃಜನಶೀಲ ಲೇಖಕ, ಕತೆಗಾರ, ಅಂಕಣಕಾರ, ರಾಜ್ಯಮಟ್ಟದ ಹಲವು ಜನಪ್ರಿಯ ಪತ್ರಿಕೆಗಳಲ್ಲಿ ನೂರಾರು ಬರಹಗಳು ಪ್ರಕಟವಾಗಿವೆ. ‘ಹೊಸದಿಗಂತ’ ಪತ್ರಿಕೆಯಲ್ಲಿ 2011ರಿಂದ 2014ರವರೆಗೆ ‘ಪರದೇಶಿ ಪರಪಂಚ’ ಅಂಕಣ, ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ಕೈಗೊಂಡ ಚೊಚ್ಚಲ ಅಮೆರಿಕ ಪ್ರವಾಸ ಕುರಿತ ವರದಿ ‘ಅಂಕಲ್ ಸ್ಯಾಮ್ ಅಂಗಳದಲ್ಲಿ ಮೋದಿ ಮೋಡಿ’, ಅಮೆರಿಕ ಅಧ್ಯಕ್ಷೀಯ ಚುನಾವಣಾ ಕುರಿತ ಸರಣಿ ‘ಚುನಾವಣಾ ನಾಡಿನಿಂದ’ ‘ಪ್ರಜಾವಾಣಿ’ಯಲ್ಲಿ ಪ್ರಕಟಕೊಂಡು ಜನಮನ್ನಣೆಗಳಿಸಿವೆ. ‘ಸೀಮೋಲ್ಲಂಘನ’ ಅಂಕಣ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ 2015ರಿಂದ ಪ್ರಕಟವಾಗುತ್ತಿದೆ. ‘ಸೀಮೋಲ್ಲಂಘನ ಭಾಗ - 1' ಹಾಗೂ ‘ಸೀಮೋಲ್ಲಂಘನ ಭಾಗ - 2' ಕೃತಿಗಳು ಪ್ರಕಟವಾಗಿವೆ. 2015ರಲ್ಲಿ ಮಂಡ್ಯ ಜಿಲ್ಲೆಯ ಸರ್.ಎಂ.ವಿ ಪ್ರಶಸ್ತಿ, 2017ರಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಂಕಣ ಬರಹ ಕ್ಷೇತ್ರದ ದುಡಿಮೆಗೆ ಗೌರವ ಸಂದಿದೆ.