ಸೌಮ್ಯ ಅವರು ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನ ಹೊಳೆ ಗ್ರಾಮದವರು. ಪ್ರಸ್ತುತ ಹಾಲಿ ದಾವಣಗೆರೆ ನಗರದಲ್ಲಿ ವಾಸವಾಗಿದ್ದು, ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕರ್ತವ್ಯದಲ್ಲಿದ್ದಾರೆ. 'ಮಾಸ್ತಿಯವರ ಸಣ್ಣ ಕಥೆಗಳಲ್ಲಿ ಸ್ತ್ರೀ ಸಂವೇದನೆ' ಎಂಬ ವಿಷಯದ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ. ಬರವಣಿಗೆ ಅವರ ಹವ್ಯಾಸ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಕವಿತೆ ಇವರ ಇಷ್ಟದ ಪ್ರಕಾರ. ಅನೇಕ ಕಡೆ ಇವರ ಕವಿತೆಗಳು ಪ್ರಕಟವಾಗಿವೆ. ಪುಟ್ಟ ಕಥೆಗಳನ್ನು ಪ್ರಭಾವಿಯಾಗಿ ಬರೆಯುವ ಅವರು ನಿರಂತರವಾಗಿ ಉದಯವಾಣಿಯಲ್ಲಿ ಕಥೆಗಳನ್ನು ಬರೆಯುತ್ತಿದ್ದಾರೆ. ಹಲವು ದೊಡ್ಡ ಕಥೆಗಳೂ ಪ್ರಕಟವಾಗಿವೆ. 'ಸಂಜೆ ಐದರ ಸಂತೆ' ಅವರ ಮೊದಲ ಕವನ ಸಂಕಲನ.