ಸಂಗೀತಗಾರ್ತಿ ಸ್ಮಿತಾ ಕಾರ್ತಿಕ್ ಅವರು ಕವಿ, ಲೇಖಕಿ ಕೂಡ. ಲಘುಸಂಗೀತ ಮತ್ತು ಚಿತ್ರಸಂಗೀತದಲ್ಲಿ ಕಳೆದ ಕೆಲ ವರ್ಷಗಳಿಂದ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಕೆ.ಜಿ. ಕನಕಲಕ್ಷ್ಮಿ ಅವರಿಂದ ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಸ್ಮಿತಾ ಅವರು ಗುರು ಸೋಮಸುಂದರಂ ಅವರಿಂದ ಲಘುಸಂಗೀತ ಕಲಿತಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ರಾಜನ್ -ನಾಗೇಂದ್ರ ಅವರಿಂದ ಚಿತ್ರಗೀತೆಗಳಿಗೆ ಸಂಬಂಧಿಸಿದಂತೆ ನೆರವು ಪಡೆದಿದ್ದಾರೆ.
ದೇಶ-ವಿದೇಶಗಳಲ್ಲಿ ಸಂಗೀತ ಕಚೇರಿ ನೀಡಿರುವ ಸ್ಮಿತಾ ಅವರ ’ನಡಿ ಮನವೆ ರಾಯರ ಬೃಂದಾವನಕೆ’ ಹಾಗೂ ’ಕದ್ರಿ ಮಂಜುನಾಥ ಗೀತಾಮೃತ’ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ರಘುನಂದನ್ ಶ್ರೀನಿವಾಸನ್ ಅವರ ’ಸ್ವರಸಾಮ್ರಾಟ್ ರಾಜನ್ ನಾಗೇಂದ್ರ” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.