ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಮೂಲತಃ ಹೊಸನಗರದ ಹುಲಿಕಲ್ ನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ಅನೇಕ ಕತೆಗಳು ನಾಡಿವ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ ಹಾಗೂ ಬರಹ ಅವರ ಆಸಕ್ತಿದಾಯಕ ಕ್ಷೇತ್ರ. ಮೈಸೂರು ಚಿತ್ರಕಲೆ, ತಂಜಾವೂರ್ ಚಿತ್ರಕಲೆ, ಬೌಟಿಕ್ ಚಿತ್ರಕಲೆ, ಕಲಾಕೃತಿ, ದೂರದರ್ಶನದಲ್ಲಿ ಕಸೂತಿ ಕಲೆ ಪ್ರದರ್ಶನ, ಮತ್ತು ಪರಿಕಲ್ಪನೆಯ ಹಲವು ನಾಟಕಗಳ ಪ್ರದರ್ಶನಗಳನ್ನು ನೀಡಿರುತ್ತಾರೆ. ಚಂದನ ವಾಹಿನಿಯಲ್ಲಿ ಸಾಹಿತ್ಯ ಕುರಿತು ಸಂದರ್ಶನ ನೀಡಿದ್ದು, ಆಕಾಶವಾಣಿ ವನಿತಾ ವಿಭಾಗದಲ್ಲಿ ಕತೆ ಪ್ರಸ್ತುತಿಯನ್ನು ಮಾಡಿರುತ್ತಾರೆ.
ಕೃತಿಗಳು : ಭಕ್ತಿ ಭಾವ ಸಿರಿ (ಭಕ್ತಿ ಗೀತೆಗಳ ಸಂಕಲನ), ನಡೆದು ಬಂದ ದಾರಿ (ಕವನ ಸಂಕಲನ), ಭಾವ ಗುಚ್ಛ (ಕತಾ ಸಂಕಲನ), ತಲ್ಲಣಿಸದಿರು ಮನವೇ (ಕಥಾ ಸಂಕಲನ), ಸಿರಿ ನುಡಿ (ಪ್ರಬಂಧ ಸಂಕಲನ), ತಲ್ಲಣಿಸದಿರು ಮನವೇ (ಕತಾ ಸಂಕಲನ).