ಶೃತಿ ಗದ್ದೆಗಲ್ ಮಲೆನಾಡಿನವರು. ಚಂದ್ರಶೇಖರ ಜೋಯ್ಸ್ ಮತ್ತು ಮಾಲತಿ ಅವರ ಪುತ್ರಿ. ಓದಿದ್ದು ಹೇರಂಭಾಪುರ ಪ್ರಾಥಮಿಕ ಪಾಠಶಾಲೆ. ನಂತರ ಪ್ರೌಢಶಿಕ್ಷಣ ಕಟ್ಟೆಹಕ್ಕಲಿನ ಸರ್ಕಾರಿ ಶಾಲೆಯಲ್ಲಿ. ಪದವಿ ಪೂರ್ವ ಶಿಕ್ಷಣ ಪಡೆದದ್ದು ತೀರ್ಥಹಳ್ಳಿಯ ತುಂಗಾ ವಿದ್ಯಾಲಯದಲ್ಲಿ. ಮಲೆನಾಡಿನ ಗದ್ದೆಗಲ್ ಊರಿನ ಶ್ರೀರಾಮಕೃಷ್ಣರನ್ನು ವರಿಸಿದೆ. ಮದುವೆಯ ನಂತರ ಸ್ವಲ್ಪ ಕಾಲ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ. ಮತ್ತೆ ಆ ಆಸೆ ಚಿಗುರಿದ್ದು ಮುಖಪುಟ ಸೇರಿದ ಮೇಲೆ. ಅದಕ್ಕಾಗಿ ಸಾಹಿತ್ಯದ ಗುಂಪು ಸೇರಿಕೊಂಡು ಬರವಣಿಗೆ ಪ್ರಾರಂಭಿಸಿದೆ. ಹಾಗೆಯೇ ಮಂಗಳ, ಕರ್ಮವೀರ ಪತ್ರಿಕೆಗಳಲ್ಲಿ ನಾನು ಬರೆದ ಹಾಸ್ಯಲೇಖನ ಪ್ರಕಟಣೆಗೊಂಡು ಮತ್ತಷ್ಟು ಉತ್ತೇಜನ ದೊರೆತಂತಾಯಿತು.