ಶ್ರೀನಿವಾಸಮೂರ್ತಿ ಎನ್. ಎಸ್. ರವರು ಗಣಿತ ಲೇಖಕರಾಗಿದ್ದ ಶ್ರೀ ಸೀತಾರಾಮ ರಾವ್ ಎನ್. ಎಸ್. ಅವರ ಪುತ್ರರಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು, ಕರ್ಣಾಟಕ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಮೂಲತಃ ಶಿವಮೊಗ್ಗದಲ್ಲಿ ನೆಲೆಸಿದ್ದು ಪ್ರಸ್ತುತ ಕಾರ್ಯ ನಿಮಿತ್ತ ಬೆಂಗಳೂರಿನ ಪ್ರಾದೇಶಿಕ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರಾಗಿರುವ ಇವರು ವಿವಿಧ ಬಳಗದ ಮೂಲಕ ಇತಿಹಾಸದ ಹೊಸ ಹೊರಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ.. ಶಿಲ್ಪಕಲಾ ದೇವಾಲಯಕ್ಕೆ ದಾರಿ ಹೆಸರಿನಲ್ಲಿ 250 ಅಂಕಣಗಳ ನಾಲ್ಕು ಪುಸ್ತಕ ಬಂದಿವೆ. ಶಿಲ್ಪಕಲಾ ದೇವಾಲಯಕ್ಕೆ ದಾರಿ ಮೊದಲ ಸಂಪುಟಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಕಳಿಂಗ ಭಾಷಾ ಪುಸ್ತಕ ಪ್ರಶಸ್ತಿ-2022 ಕನ್ನಡ (ಕೆ.ಎಲ್.ಎಫ್. ಪ್ರಶಸ್ತಿ) ಸಿಕ್ಕಿದೆ. ಆಕಾಶವಾಣಿಯಲ್ಲಿ ಇವರ ಸಂದರ್ಶನ ಬಂದಿದ್ದು ವಿವಿಧ ಮಾಧ್ಯಮದ ಮೂಲಕ ದೇವಾಲಯಗಳ ಪರಿಚಯವನ್ನ ತಲುಪಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಕೃತಿಗಳು: ಶಿವಮೊಗ್ಗ ಜಿಲ್ಲೆಯ ಶಿಲ್ಪಕಲಾ ದೇವಾಲಯಕ್ಕೆ ದಾರಿ