ಮಣೆಗಾರ್ ಶೆಕ್ಷಾವಲಿ ಎಂಬುದು ಇವರ ಪೂರ್ಣ ಹೆಸರು. ತಮ್ಮ ಹೆಸರಿನ (ಶೆ)ಕ್ಷಾವ(ಲಿ) ಮೊದಲ ಮತ್ತು ನಾಲ್ಕನೇ ಅಕ್ಷರ ಸೇರಿಸಿ ಜೊತೆಗೆ ಹುಟ್ಟೂರಿನ ಮೇಲಿನ ಅಭಿಮಾನದಿಂದ "ಶೆಲ್ಲಿ ಕೂಡ್ಲಿಗಿ" ಎಂಬ ಕಾವ್ಯನಾಮದ ಮೂಲಕ ನಾನು ಕೃತಿಗಳನ್ನು ರಚಿಸುತ್ತಿರುವೆ. ತಂದೆ ಅಬ್ದುಲ್ ರೋಫ್ ತಾಯಿ ಜಮಿಲಾ ಬೀ.
ಪ್ರಾಥಮಿಕ ಶಿಕ್ಷಣ ಹುಟ್ಟೂರು ಕೂಡ್ಲಿಗಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ 1992ನೇ ಸಾಲಿನಿಂದ ಆರಂಭವಾಯಿತು. 1999ರಿಂದ ಪ್ರೌಢ ಶಿಕ್ಷಣನ್ನು ಅದೇ ಊರಿನ ಐತಿಹಾಸಿಕ ಶಾಲೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾಯಿತು. ಹೊಸಪೇಟೆ(ಪ್ರಸ್ತುತ ವಿಜಯನಗರ)ಯ ನೈಸೆಟ್ ಡಿ.ಇಡಿ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಡಿ.ಇಡಿ ಪದವಿ. ನೌಕರಿ ಮಾಡುತ್ತಲೇ ಬಾಹ್ಮವಾಗಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಹಾಗೂ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ಇಂದಿರಾಗಾಂಧಿ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಪದವಿ ಪಡೆದಿರುವರು. ಶಿಕ್ಷಕನಾಗಿ ಹಲವೆಡೆ ವರ್ಷ್ಗಳ ಅನುಭವ ಪಡೆದು, ಪ್ರಸ್ತುತ ಕೂಡ್ಲಿಗಿ ಪಟ್ಟಣದ ಸ.ಹಿ.ಪ್ರಾ.ಶಾಲೆ.ರಾಜೀವ್ ಗಾಂಧಿ ನಗರದಲ್ಲಿ 2ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
2018ರಲ್ಲಿ ಶೈಕ್ಷಣಿಕ ಮತ್ತು ಸಾಹಿತ್ಯ ಸೇವೆಗೆ "ಚೇತನ ಸಾಹಿತ್ಯ ಸಮ್ಮಾನ್ ಪ್ರಶಸ್ತಿ" "ಕರುನಾಡ ಕಣ್ಮಣಿ ಪ್ರಶಸ್ತಿ" ಲಭಿಸಿದೆ. 2019ರಲ್ಲಿ "ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ", "ಜ್ಞಾನ ಸಿಂಧು ರಾಜ್ಯ ಪ್ರಶಸ್ತಿ" ಲಬಿಸಿವೆ. 2021ರಲ್ಲಿ "ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ", "ನೆನಪಿನ ನಾವಿಕ ಸಾಹಿತ್ಯ ಪ್ರಶಸ್ತಿ" ಲಭಿಸಿವೆ. ಹೆಚ್.ಜಿ.ರಾಧಾದೇವಿ ಕಥಾಸ್ಪರ್ಧೆಯಲ್ಲಿ ನನ್ನ "ಸತಿಯ ಸೀರೆ" ಕಥೆಗೆ ದ್ವಿತೀಯ ಬಹುಮಾನ ಲಭಿಸಿದೆ.
ಕೃತಿ ಗಳು: ಕೇರಿ ಮುಟ್ಟಿದ ಮಾವು’ ಕಾದಂಬರಿ (2018), ’ಎರಡು ಲೋಟದ ಹುಡುಗಿ” ಕಾದಂಬರಿ, ಹಥೇಲಿ(ಕಥಾ ಸಂಕಲನ)