ಲೇಖಕಿ ಶಾಂತಾ ಮಠ ಅವರು ಮೂಲತಃ ಕಲಬುರಗಿಯವರು. ತಂದೆ ಚನ್ನಬಸವಯ್ಯ, ತಾಯಿ ಚಂದ್ರಕಲಾ. ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪದವೀಧರರು. ಪ್ರಜ್ಞಾ ಕಾನೂನು ಸಲಹಾ ಸಮಿತಿ ಸಹ ಕಾರ್ಯದರ್ಶಿ, ಭಾರತ ಜ್ಞಾನ ವಿಜ್ಞಾನ ಸಮಿತಿ, ಗುಲ್ಬರ್ಗಾ ವಿಭಾಗದ ಮಹಿಳಾ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದ್ದಾರೆ. ‘ಆಕಾಶವಾಣಿ’ ಅವರ ಚಿಂತನ ಕೃತಿ 2010ರಲ್ಲಿ ಪ್ರಕಟಿಸಿದ್ದಾರೆ.