ಶಂಕರ ಕಟಗಿ ಅವರು 1957 ಮೇ 20ರಂದು ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ಉಪನ್ಯಾಸಕರು. ಸರಕಾರಿ ಪದವ ಪೂರ್ವ ಕಾಲೇಜಿನಲ್ಲಿ 1985 ರಿಂದ ಇಂಗ್ಲೀಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ಕೌಜಗೇರಿ,ಗುಡಿಗೇರಿ, ವಿಜಾಪುರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 3 ವರ್ಷಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಜಿಲ್ಲಾ ನಿರ್ದೇಶಕರಾಗಿಯೂ ಸೇವೆಗೈದಿದ್ದಾರೆ. ಇದ್ದರೆ ಬಿಸಿಲು ಮಳೆ (ಸಮಗ್ರ ಕತೆಗಳ ಸಂಗ್ರಹ). ನೆಲದನಾಲಿಗೆ (ಕಾವ್ಯ), ದಟ್ಟಿ ದಾವಣಿ ಇವರ ಕೃತಿಗಳು. ಗಣೆಯ ನಾದ ಕಾವ್ಯಕ್ಕೆ 2001ನೇ ಸಾಲಿನ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.
‘ಸಂವಾದ’ ದ್ವಿಮಾಸಿಕ ಸಂಕಲನದಲ್ಲಿ ಶರೀಫನಿಗೆ, ಇದಿಮಾಯಿ ತಾಯಿ ಹಾಡು, ಕಾವ್ಯ-ಸಂವಹನಶೀಲತೆ ಇತ್ಯಾದಿ, ಬೆಳಗು: ರಂಗೋಲಿ ಮತ್ತು ಮಗಳು, ಹನಿಯಿಂದ ಹರಿಯುವ ನದಿ, ಧ್ಯಾನಸ್ಥ ಬೆಟ್ಟ , ಕುತೂಹಲಗಳ ಬೆನ್ನ ಹಿಂದೆ, ಹೊಸ ಓದು ಹೀಗೆ ವಿವಿಧ ಲೇಖನಗಳನ್ನು ಬರೆದಿದ್ದಾರೆ. ಹೊಸದು ಅವು (ಸಂಕಲನ) ಶ್ರೀನಿವಾಸ ತಾವರಗಿರಿ(ಮೋನೋಗ್ರಾಫ್)