ಲೇಖಕಿ ಶಶಿಕಲ ರಾವ್ ಅವರಿಗೆ ಬಾಲ್ಯದಿಂದಲೂ ಕನ್ನಡದಲ್ಲಿ ಬರೆದು ಪತ್ರಿಕೆಗಳಿಗೆ ಕಳುಹಿಸುವ ಅಭ್ಯಾಸವಿತ್ತು. ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದರೂ ಕನ್ನಡದಲ್ಲಿ ಬರೆಯುವ ಹವ್ಯಾಸವನ್ನು ಹೊಂದಿದ್ದರು. ಹಲವು ವರ್ಷಗಳಿಂದ ಕನ್ನಡದ ಕಂಪಿಲ್ಲದ ನಾಡಿನಲ್ಲಿ ಇರಬೇಕಾಗಿದ್ದರೂ, ಪತ್ರಿಕೆ, ಕಾದಂಬರಿಗಳನ್ನು ತರಿಸಿಕೊಂಡು ಓದುತ್ತಲೇ ಕನ್ನಡದ ಮೇಲಿನ ಆಸಕ್ತಿಯನ್ನು ಕಾಪಾಡಿಕೊಂಡವರು.