About the Author

ಲೇಖಕ ಸಂಗಮೇಶ ಉಪಾಸೆ ಮೂಲತಃ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿಯವರು. ಕವನ, ಲೇಖನ, ವಿಡಂಬನೆಗಳ ಮೂಲಕ ಸಾಹಿತ್ಯ ವಲಯದಲ್ಲಿ ಪರಿಚಿತರು. ಧಾರವಾಡದ ಕರ್ನಾಟಕ  ಕಾಲೇಜುನಲ್ಲಿ 1997 ರಲ್ಲಿ ಬಿ.ಎ ಪದವಿ, 1998 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ, 1998ರಲ್ಲಿ ಎನ್.ಇ.ಟಿ ಹಾಗೂ 2006 ರಲ್ಲಿ ಕೆ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ರಾಜ್ಯ, ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಸಹಾಯಕ ನಿಯಂತ್ರಕರಾಗಿ ನೇಮಕರಾದರು. ಅವರು ಮೊನಚು ಮಾತು, ಹಾಸ್ಯ ಪ್ರಸಂಗಗಳು ಹಾಗೂ ವ್ಯಂಗ್ಯೋಕ್ತಿಗಳ ಮೂಲಕ ಸುಲಲಿತವಾಗಿ ಅಭಿವ್ಯಕ್ತಿಯನ್ನು ತೋರ್ಪಡಿಸುವ ಪ್ರತಿಭಾವಂತ, ಲೇಖಕ ಮತ್ತು ನಟರೂ ಆಗಿದ್ದಾರೆ. ರಂಗನಟರಾಗಿ, ದೂರದರ್ಶನ ಮತ್ತು ಚಲನಚಿತ್ರಗಳ ನಟರಾಗಿಯೂ ಗಮನ ಸೆಳೆದಿದ್ದಾರೆ. ನುಡಿಸಿ ಹಾಡೋಣ ಬನ್ನಿ, ವೇದಿಕೆ, ಪಿಸುಮಾತು ಅವರು ಈ.ಟಿ.ವಿ. ಕನ್ನಡಕ್ಕೆ ಬರೆದಂತಹ ನಿರೂಪಣಾ ಸಾಹಿತ್ಯಗಳಾಗಿವೆ. ಈ ಸಂಜೆ, ಸಿನಿಮಿನಿ ಸ್ಕ್ರೀನ್, ಅರಗಿಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡಿಗರ ಕನ್ನಡಿ ಮಾಸ ಪತ್ರಿಕೆಯಲ್ಲಿ ಸಂಪಾದಕ ಮತ್ತು ಪ್ರಕಾಶಕರಾಗಿ ಕಾರ್ಯನಿರ್ವಹಿಸಿದ್ದಾರೆ. 

ಅನುಭವ: ಧಾರವಾಡದ ಅಭಿನಯ ಭಾರತಿ ಹಾಗೂ ಚಿನ್ನರ ಲೋಕ, ಬಾಲಭವನ ಸಮಿತಿ ಬೆಂಗಳೂರು, ದೇವದಾಸಿ ನಿರ್ಮೂಲನ ಶಿಬಿರ, ಘಟಪ್ರಭ, ಐಶ್ವರ್ಯ ಕಲಾನಿಕೇತನ, ಮಕ್ಕಳ ರಂಗ ಶಿಬಿರ, ದೊಡ್ಡಬಳ್ಳಾಪುರ, ಹಾಗೂ 4 ವರ್ಷ ಅರೆಕಾಲಿಕ ಉಪನ್ಯಾಸಕರಾಗಿ ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. 

ಕೃತಿಗಳು: ದೇವರುಗಳಿವೆ  ಎಚ್ಚರಿಕೆ , ಬೆಳಕಿನೆಡೆಗೆ(1995), ಬಲಸು ಬರಹ ಬುತ್ತಿ(1998), ಸಾಧನ ಯೋಗಿ ಶ್ರಮದಾನ(2006), ಗಾಂಧಿ ಮೆಟ್ಟು ಬೇಕು(2008), ರಂಗ ಬಹಿರಂಗ(2009), ಬೆಂಕಿ (2010), ಸಾವಿನ ಸನ್ನಿಧಿಯಲ್ಲಿ(2011), ನನ್ನದೊಂದು ಕನಸಿದೆ(2011), ವೈಕುಂಠ ಯಾತ್ರೆ(2011)(ಪ್ರಕಟಿತ ಕೃತಿಗಳು), ಚಾಣಕ್ಯ , ಅಳಿಯ ದೇವರು, ಖಾಸಗೀಕರಣ(ನಿರ್ದೇಶಿತ ನಾಟಕಗಳು), ನನ್ನವಳಿಗಾಗಿ, ನಾದರಂಜಿನಿ(ಧ್ವನಿಸಾಂದ್ರಿಕೆಗಳು), ಹಿಡಿಬ್ಯಾಡ್ರೆಪ್ಪೋ ತಪ್ಪು ದಾರಿ, ದ್ಯಾಮಾ-ಕೆಂಚಿ, ಖಾಸಗೀಕರಣ, ನೂಳು ನೋವು ಎಳೆ ಎಳೆ(ರೇಡಿಯೋ ನಾಟಕಗಳು)

ಪ್ರಶಸ್ತಿ ಮತ್ತುಗೌರವ:ಕನ್ನಡಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ-2011, ಸಂಕ್ರಮಣ ಕಾವ್ಯ ಪ್ರಶಸ್ತಿ-2010, ಎಂ.ಜಿ. ರಂಗನಾಥ್ ರಾವ್ ಮೆಮೋರಿಯಲ್ ವಿಶೇಷ ಪ್ರಶಸ್ತಿ-2009-10, ದೇವರ ದಾಸಿಮಯ್ಯ ಪ್ರಶಸ್ತಿ-2010, ಸಿ.ಹೆಚ್.ರೇವಡಿಗಾರ್ ರಾಜ್ಯ ಪ್ರಶಸ್ತಿ(2012), ಅಭಿನಂದನ ಪತ್ರ, ಕನ್ನಡ ಕಲಾ ಶ್ರೇಷ್ಠ ಪ್ರಶಸ್ತಿ, ದಶಮಾನೋತ್ಸವ ಗೌರವ, ವೋಕೇಷನಲ್ ಅವಾರ್ಡ್, ಸಾಂಸ್ಕೃತಿಕ ಕಲಾ ರತ್ನ, ವಿಶಾಲಾಕ್ಷಿ ದತ್ತಿ ನಿಧಿ, ಕುವೆಂಪು ಶ್ರೀ, ವಿಶ್ವ ಮಾನವ ಕುವೆಂಪು ರತ್ನ ಪ್ರಶಸ್ತಿ, ಕಲಾ ರತ್ನ, ವಿಶ್ವ ಕಲಾರತ್ನ ಪ್ರಶಸ್ತಿ, ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ.

ಸಂಗಮೇಶ ಉಪಾಸೆ