About the Author

ಲೇಖಕ ಡಾ. ಎಸ್.ಎಸ್. ಗುಬ್ಬಿ (ಸಿದ್ಧಬಸಯ್ಯ ಶಿವಶಂಕರಯ್ಯ ಗುಬ್ಬಿ) ಬಿ.ಎಸ್.ಸಿ, ಎಂಬಿಬಿಎಸ್ ಹಾಗೂ ಎಂ.ಎಸ್. (ಆರ್ಥೋಪೆಡಿಕ್) ಪದವೀಧರರು. ಕಬುರಗಿಯ ಎಂ.ಎನ್. ಆರ್. ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ವೃತ್ತಿ ಆರಂಭಿಸಿ ನಂತರ ತೆಲಂಗಾಣ ರಾಜ್ಯದ ಸಂಗಾರೆಡ್ಡಿಯ ಎಂ.ಎಸ್.ಆರ್ ವೈದ್ಯಕೀಯ ಕಾಲೇಜಿನಲ್ಲಿ , ಪುನಃ ಅವರು ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ಕನ್ಸ್ ಲ್ಟಂಟ್ ಆಗಿ ಸೇವೆ ಸಲ್ಲಿಸಿದರು. ಕಲಬುರಗಿಯ ಜಿಮ್ಸ್ ನಲ್ಲಿ ಆರ್ಥೋಪೆಡಿಕ್ ವಿಭಾಗದ ಪ್ರೊಫೆಸರ್ ..ಹೀಗೆ ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಬೆನ್ನು, ನರರೋಗ ಚಿಕಿತ್ಸೆ, ಮೂಳೆ ಮುರಿತ ಇತ್ಯಾದಿ ಕ್ಷೇತ್ರದಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ಡಾ. ಸ.ಜ. ನಾಗಲೋಟಿಮಠ ಅವರ ಅಭಿನಂದನಾ ಗ್ರಂಥ -ಜೀವಧಾರೆ, ಹಾಗೂ ಡಾ. ಲೀಲಾವತಿ ದೇವದಾಸ್ ಅವರ ಅಭಿನಂದನಾ ಗ್ರಂಥ-ಸೃಷ್ಟಿ-ಈ ಎರಡೂ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಕನ್ನಡ ವೈದ್ಯಕೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಯಲ್ಲಿ ಮಾನಸಿಕ ಸ್ವಾಸ್ಥ್ಯ, ಸಾಪ್ತಾಹಿಕ ಸ್ವಾಸ್ಥ್ಯ ಸೇರಿದಂತೆ ಹತ್ತು ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಡಿಯೂ ಹಲವಾರು ಜಾಗೃತಿ ಸಮಾರಂಭ/ ಉಪನ್ಯಾಸಗಳನ್ನು ಕಮ್ಮಟ/ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಕರ್ನಾಟಕ ಆರ್ಥೋಪೆಡಿಕ್ ಸಂಘ, ಇಂಡಿಯನ್ ಆರ್ಥೋಪೆಡಿಕ್ ಸಂಘ ಸೇರಿದಂತೆ ಹತ್ತು ಹಲವು ವೈದ್ಯಕೀಯ ವಲಯದ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿದ್ದು, ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಕೃತಿಗಳು: ಚೈತನ್ಯ (ಕವನ ಸಂಕಲನ-ಗುರುಮಠಕಲ್ ಸಿರಿಗನ್ನಡ ಪ್ರತಿಷ್ಠಾನದಿಂದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ, ಕಲಬುರಗಿಯ ಲೇಖಕರ ಬರಹಗಾರರ ಸಂಘದಿಂದ ಕನ್ನಡ ನಾಡು ಸಾಹಿತ್ಯ ಕೃಷಿ ಪ್ರಶಸ್ತಿ ಲಭಿಸಿದೆ). , ಮಾತೃವಾತ್ಸಲ್ಯ (ಕವನ ಸಂಕಲನ-ರಾಜ್ಯೋತ್ಸವ ಪ್ರಶಸ್ತಿ) ಗುಬ್ಬಿಗೂಡು, ಹೃದಯ ಸಂಗಮ, ಜಂಗಮ ಜೋಳಿಗೆ, ಧರ್ಮಯೋಗಿ, ನೇಗಿಲಯೋಗಿ, ಸಹಯೋಗಿ, ಮಹಾಪ್ರಳಯ ಇತ್ಯಾದಿ ಪ್ರಮುಖ ಕೃತಿಗಳು

ಪ್ರಶಸ್ತಿ-ಪುರಸ್ಕಾರಗಳು:ಕಲಬುರಗಿಯ  ವಿಶ್ವ ಆರೋಗ್ಯ ಕ್ರೀಡಾ ಪ್ರತಿಷ್ಠಾನದಿಂದ ಕಾಯಕ ಜೀವಿ ಪ್ರಶಸ್ತಿ, ಬೆಂಗಳೂರಿನ ಡಾ. ರಾಜಕುಮಾರ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ ಡಾ. ರಾಜ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಪ್ರತಿಭಾ ವರ್ಧಕ ಪ್ರತಿಷ್ಠಾನದಿಂದ  ರಾಜ್ಯ ಭೂಷಣ ಪ್ರಶಸ್ತಿ, ರಾಮನಗರದ ಪ್ರತಿಮಾ ನಾಟಕ ಮತ್ತು ಮಹಿಳಾ ಸಂಘದಿಂದ ಕರುನಾಡ ಕುಲತಿಲಕ ಪ್ರಶಸ್ತಿ, ಬೆಂಗಳೂರಿನ ಕನ್ನಡ ಅಭಿವೃದ್ಧಿ ಸಮಿತಿಯಿಂದ ಕಾಯಕ ರತ್ನ ಪ್ರಶಸ್ತಿ, ಕಲಬುರಗಿಯ ಡಿ.ದೇವರಾಜು ಅರಸು ಸಮಿತಿಯಿಂದ ಅರಸು ಪ್ರಸಸ್ತಿ, ಸುರಪುರ ಸಂಸ್ಥಾನದ  ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ,, ಬೆಂಗಳೂರಿನಿಂದ ಕಾಡುವ ಕಿರಂ ಪ್ರಶಸ್ತಿ, ಮಾತೋಶ್ರೀ ಈರಮ್ಮ ವಡ್ಡನಕೇರಿ  ಪ್ರತಿಷ್ಠಾನದಿಂದ ನೀಡುವ ಅವ್ವ ಪ್ರಶಸ್ತಿ ಸೇರಿದಂತೆ ನೂರೆಂಟು ಪ್ರಶಸ್ತಿ-ಪುರಸ್ಕಾರಗಳು, ಸನ್ಮಾನಗಳು ಲಭಿಸಿವೆ.  

ಎಸ್.ಎಸ್. ಗುಬ್ಬಿ

(14 Jun 1948)