About the Author

ರವಿ ಹಂಪಿ ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಿ ಗ್ರಾಮದವರು.  ಪ್ರಸ್ತುತ ಲಿಂಗಸ್ಗೂರು ತಾಲೂಕಿನ ಕಸಬಾಲಿಂಗಸ್ಗೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಸಹಾಯ ಪಡೆದ ‘ಸಖ-ಸಖಿ’ ಗಜಲ್ ಸಂಕಲನ ಸೃಷ್ಠಿ ಪ್ರಕಾಶನದಿಂದ ಪ್ರಕಟಗೊಂಡಿದೆ.  ಇವರ ಕಥೆ ಗಜಲ್‌ಗಳು ತುಷಾರ, ಮಲ್ಲಿಗೆ, ಮಯೂರ, ಸಂಯುಕ್ತ ಕರ್ನಾಟಕ ಹೊಸತು ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಅನುವಾದದಲ್ಲಿ ಆಸಕ್ತಿ ಹೊಂದಿರುವ ಇವರು ಇತ್ತೀಚಿಗೆ ಇಂಗ್ಲೀಷಿನಿಂದ ಕಾದಂಬರಿಗಳ ಅನುವಾದದಲ್ಲಿ ತೊಡಗಿಸಿಕೊಂಡಿದ್ದಾರೆ.  ಸಂಚಯ ಕಾವ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇದು ಇವರ ಎರಡನೆಯ ಕೃತಿ.

ಕೃತಿಗಳು: ಸಖ ಸಖಿ, ನದಿಯೊಂದು ನಿದ್ರಿಸಿದಾಗ

ರವಿಕುಮಾರ ಹಂಪಿ

(01 Jun 1979)