About the Author

ಕವಯತ್ರಿ ನಾಗರತ್ನ ಅವರು 1964 ಆಗಸ್ಟ್ 12 ರಂದು ತುಮಕೂರು ಕಿಲ್ಲೆಯ ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ಜನಿಸಿದರು. ಅವರ ಕಾವ್ಯನಾಮ- ರತ್ನಾ ಬಡವನಹಳ್ಳಿ. ’ಮೌನದಿಂಚರ, ಮುಂಜಾವಿನ ಮಾತು’ ಅವರ ಎರಡು ಕವನ ಸಂಕಲನಗಳು. ದಾಸ ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದು ಮುಕ್ತಕ, ಗಜ಼ಲ್, ಹನಿಗವನ, ಕವನಗಳು, ಭಾವಗೀತೆ, ಸಣ್ಣಕಥೆ ಬರೆಯುವ ಹವ್ಯಾಸ ಹೊಂದಿದ್ಧಾರೆ. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು, ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ದೊರೆತಿವೆ. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ನಿಂದ ಕನ್ನಡ ಸೇವಾರತ್ನ ಹಾಗೂ ಮಧುಗಿರಿ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ರತ್ನ ಬಡವನಹಳ್ಳಿ (ನಾಗರತ್ನ)

(12 Aug 1964)