ಕವಿ, ಲೇಖಕಿ ಹಾಗೂ ಉತ್ತಮ ವಾಗ್ಮಿಯಾಗಿರುವ ರಾಜ್ಯಶ್ರೀ ಎಚ್.ಎನ್ ಅವರು ಬಿ.ಎಸ್.ಸಿ, ಡಿಪ್ಲಮಾ-ಇನ್-ಕಂಪ್ಯೂಟರ್, ಹಾಗೂ ಎಂ.ಎ ಪದವಿದರರು. ಭಾರತೀಯ ಜೀವವಿಮಾ ನಿಗಮದಲ್ಲಿ ಕೆಲಸಮಾಡುತ್ತಿರುವ ಇವರು ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ.ಏಕಪಾತ್ರಾಭಿನಯದಲ್ಲಿ ರಾಜ್ಯ ಪ್ರಶಸ್ತಿ ವಿಜೇತೆಯಾಗಿರುವ ರಾಜ್ಯಶ್ರೀ ದೂರದರ್ಶನದಲ್ಲಿ ನೂರಕ್ಕೂ ಹೆಚ್ಚು ಸಂದರ್ಶನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕಾಡುವ ನೆನಪುಗಳು ಇವರ ಎರಡನೆಯ ಸಂಕಲನ. ಮೊದಲನೆ ಸಂಕಲನ ಅರ್ಥ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಜನಪ್ರಿಯ ಜನರಲ್ ಮೇನೇಜರ್ ವಿ.ನವರತ್ನರಾಜು ಕುರಿತು ಜಿವನ ಚರಿತ್ರೆ ಬರೆದಿದ್ದು ಇದೊಂದು ಗದ್ಯಗ್ರಂಥವಾಗಿದೆ. ರಾಜ್ಯಶ್ರೀ ಅವರು ಹಿರಿಯ ಸಾಹಿತಿಗಳು ಹಾಗೂ ನಾಡೋಜ ದಂಪತಿಗಳಾದ ಪ್ರೊ.ಕಮಲಾ-ಹಂಪನಾ ಅವರ ಮಗಳು.