ಕವಯತ್ರಿ, ಕಥೆಗಾರ್ತಿ ಹಂಸಾ ಅವರು 1963 ಸೆಪ್ಟಂಬರ್ 01 ದೊಡ್ಡಬಳ್ಳಾಪುರದ ಗೌಡರ ಹಳ್ಳಿಯಲ್ಲಿ ಜನಿಸಿದರು. ತಂದೆ ಎಂ. ರಾಮಚಂದ್ರರಾವ್, ತಾಯಿ ಪುಷ್ಪಾವತಿ ಬಾಯಿ. ’ಶಿಶುಕವನ ಗುಚ್ಛ, ತಾರೆವನ’ ಅವರ ಪ್ರಮುಖ ಕಥಾ ಸಂಕಲನಗಳು. ’ಕನ್ನಡ ದೇಶಭಕ್ತಿ ಗೀತೆಗಳು, ಕನ್ನಡ ಗೀತೆಗಳು, ಚಿಣ್ಣರ ಚಿಲಿಪಿಲಿ, ಮಮತೆಯಂಗಳದಲ್ಲಿ’ ಮಕ್ಕಳ ಕಥಾ ಸಂಕಲನ ರಚಿಸಿದ್ದಾರೆ.
’ಗೊರೂರು ಪ್ರತಿಷ್ಠಾನದ ಗೊರೂರು ಸಾಹಿತ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಕನ್ನಡ ಅಭಿವೃದ್ದಿ ಬಳಗದ 'ಕುವೆಂಪು ಶ್ರೀ' ಪ್ರಶಸ್ತಿ’ ದೊರೆತಿದೆ.