ಪ್ರವೀಣಕುಮಾರ ಸುಲಾಖೆ ಗುಳೇದಗುಡ್ಡ ಅವರು ಕವಿ, ಲೇಖಕರು. ವೃಶ್ಚಿಕಮುನಿ ಎಂಬುದು ಇವರ ಕಾವ್ಯನಾಮ. ಪ್ರಸ್ತುತ ದಾಂಡೇಲಿಯಲ್ಲಿ ವಾಸವಾಗಿದ್ದು, ದಾಂಡೇಲಿ ಬಂಗೂರ ನಗರ ಪದವಿ ಪೂರ್ವ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ಉಪನ್ಯಾಸಕರಾಗಿ ಹಾಗೂ ಪ್ರಜಾವಾಣಿ ಪತ್ರಿಕೆಯ ಸ್ಥಳೀಯ ವರದಿಗಾರರಾಗಿದ್ದಾರೆ.
ಕೃತಿಗಳು: ಬೊಗಸೆಯಷ್ಟು ಹನಿ, ಅವಗಣನೆ (ಕವನ ಸಂಕಲನ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ದೀಪಾವಳಿ, ಯುಗಾದಿ ಕತೆ, ಕವನ ಸ್ಪರ್ಧೆಗಳಲ್ಲಿಯೂ ಇವರ ಬರಹಗಳು ಬಹುಮಾನ ಪಡೆದಿವೆ.