About the Author

ಯುವ ಕವಿ, ಬರೆಹಗಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ 1978ರ ಮಾರ್ಚ್ 11 ರಂದು ಪ್ರವೀಣ ಜನಿಸಿದರು. ನ್ಯಾಯಾಲಯದಲ್ಲಿ ಆರು ವರ್ಷದ ಸೇವೆ ನಂತರ ಅವರು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸೇವೆಗೆ (2005) ಸೇರಿದರು. ಈ ಮಧ್ಯೆ ಇದೇ ಸಂಸ್ಥೆಯಲ್ಲಿ (2011-2015) ಮಾಲ್ಡಿವ್ಸ್ ನಲ್ಲಿ ಸೇವೆ ಸಲ್ಲಿಸಿದರು. ನಂತರ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಡೆಸ್ಟಿನಿ ಎಂಬ ಸಂಸ್ಥೆ ಸ್ಥಾಪಿಸಿ, ಬ್ಯಾಂಕ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತರಬೇತಿ ಆರಂಭಿಸಿದರು. ಯುಟ್ಯೂಬ್ ನಲ್ಲಿಯೂ ಅವರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. 

ಸಂಕಲ್ಪ (ಕಾದಂಬರಿ), ವ್ಯೂಹಗನ್ನಡಿ-ಕಥಾ ಸಂಕಲನ ಹಾಗೂ  ’ಓದು, ಕಲಿಕೆ ಹಾಗೂ ಜ್ಞಾಪಕಶಕ್ತಿಯ ತಂತ್ರಗಳು’ ವಿಷಯವಾಗಿ ವಿದ್ಯಾರ್ಥಿಗಳಿಗಾಗಿ ಕೈಪಿಡಿ ರಚಿಸಿದ್ದಾರೆ. ಇವರಿಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ ಸಂದಿದೆ. ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಇವರಿಗೆ ಬಹುಮಾನ ದೊರೆತಿದೆ.

ಪ್ರವೀಣ

(11 Mar 1978)