ಪತ್ರಕರ್ತ, ಲೇಖಕ ಪ್ರಕಾಶ ಕುಗ್ವೆ ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದ ಅಂಚಿನ ಕುಗ್ವೆಯವರು. ಸ್ನಾತಕೋತ್ತರ ಅರ್ಥಶಾಸ್ತ್ರದಲ್ಲಿ ಎರಡನೇ ರ್ಯಾಂಕ್ ಪಡೆದು, ಸೀದಾ ಸೇರಿದ್ದು ಪತ್ರಿಕೋದ್ಯಮಕ್ಕೆ. ಆರಂಭದ 9 ತಿಂಗಳು ಕರ್ನಾಟಕ ನ್ಯೂಸ್ ನೆಟ್ನಲ್ಲಿ ಪತ್ರಿಕೋದ್ಯಮದ ಪಾಠ. ನಂತರ ಮಯೂರ, ಸುಧಾ ಹಾಗೂ ಪ್ರಜಾವಾಣಿಯಲ್ಲಿ ಒಟ್ಟು 20 ವರ್ಷ ಕಾರ್ಯನಿರ್ವಹಣೆ, ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆಯಲ್ಲಿ ವರದಿಗಾರರಾಗಿ ಕೆಲಸ. ದಾವಣಗೆರೆ ಜಿಲ್ಲಾ ಪತ್ರಕರ್ತರ ಸಂಘದ ಗೌರವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರು. ರಂಗ ವಿಮರ್ಶೆ, ರಾಜಕೀಯ ವಿಶ್ಲೇಷಣೆ ಆಸಕ್ತಿಯ ವಿಭಾಗಗಳು. ಮಂಗಳೂರಿನಲ್ಲಿ ಪ್ರಜಾವಾಣಿ ಬ್ಯೂರೊ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವಾಗಲೇ ಅಲ್ಲಿಂದ ಹೊರಬಂದು ಪ್ರಸ್ತುತ ಸಾಗರದಲ್ಲಿ ಸ್ಯಾನಿಟರಿ ಮತ್ತು ಬಾತ್ವೇರ್ ವ್ಯಾಪಾರ ಆರಂಭಿಸಿದ್ದಾರೆ.