ಪ್ರಕಾಶ್ ರಾಜಗೋಳಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದವರು. ಸವದತ್ತಿಯಲ್ಲಿ 1971ಯಲ್ಲಿ ಜನನ. ಹೈಸ್ಕೂಲು, ಕಾಲೇಜು ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಪಡೆದು, ಬಿವಿಬಿ ಇಂಜಿನೀರಿಂಗ್ ಕಾಲೇಜಿನಿಂದ (ಈಗ ಕೆಎಲ್‌ಈ ಟೆಕ್ನಿಕಲ್ ಯೂನಿವರ್ಸಿಟಿ) ನಿಂದ 1993ರಲ್ಲಿ ಇನ್ಸ್‌ಟ್ರುಮೆಂಟೇಷನ್ ಇಂಜಿನೀಯರಿಂಗ್‌ನಲ್ಲಿ ಪದವಿ ಗಳಿಸಿದ್ದಾರೆ. ಒಟ್ಟು 30 ವರ್ಷಗಳ ಕಾರ್ಯಾನುಭವ ಹೊಂದಿರುವ ಪ್ರಕಾಶ್ ರಾಜಗೋಳಿಯವರು ಎಸ್.ಎ.ಪಿ ಕ್ಷೇತ್ರದಲ್ಲಿ 22ಕ್ಕೂ ಹೆಚ್ಚು ವರ್ಷಗಳ ಕಾರ್ಯಾನುಭವ ಪಡೆದಿದ್ದಾರೆ. ಕನ್ನಡದಲ್ಲಿ ಲೇಖನ ಬರೆಯುವುದು, ಆಕಾಶವಾಣಿಗೆ ಕಾರ್ಯಕ್ರಮ ನೀಡುವುದು, ಸಾಮಾಜಿಕ ಸಂಘಟನೆಗಳೊಂದಿಗೆ ಕೈಜೋಡಿಸುವುದು, palindrome ನಂಬರಿನ ಭಾರತದ ರೂಪಾಯಿ ನೋಟುಗಳ ಸಂಗ್ರಹ ಇವರ ಆಸಕ್ತಿ. ಈಗಾಗಲೇ ಅವರು ಕಾರ್ಯನಿಮಿತ್ತ ಮತ್ತು ವೈಯಕ್ತಿಕವಾಗಿ 16 ವಿದೇಶಗಳನ್ನು ಸುತ್ತಿದ್ದಾರೆ.