ಪ್ರಭಾಕರ ಸಾತಖೇಡ ಅವರು ನಿವೃತ್ತ ಪ್ರಾಧ್ಯಾಪಕರು. ಹವ್ಯಾಸಿ ನಾಟಕ ರಂಗದಲ್ಲಿ ನಟ, ನಿರ್ದೆಶಕ, ಸಂಘ-ಶಿಕ್ಷಕರಾಗಿ ಕಳೆದ 4 ದಶಕಗಳಿಂದ ಸಕ್ರಿಯರಾಗಿದ್ದಾರೆ. ನಾಟಕ ಸಾಹಿತ್ಯದ ವಿಮರ್ಶಕರು. ಗುಲಬರ್ಗಾ ಜಿಲ್ಲೆ ಶತಮಾನದ ನಾಟಕ ಸಾಹಿತ್ಯ, ರಂಗಭೂಮಿ ಮತ್ತು ಚಿತ್ರಕಲೆ, ದತ್ತಾತ್ರೇಯ ಹೆರೂರು ಅವರ ನಾಟಕ ನೂರು ಕಾಕಾ, ವಿಜಯಾ ತೆಂಡೂಲ್ಕರ್ ಅವರ ಕಮಲಾ: ಒಂದು ಚಿಂತನೆ, ಅನುವಾದ ಸಾಹಿತ್ಯದ ಪ್ರಕಾರಗಳು ಹಾಗೂ ಪ್ರಯೋಜನಗಳು, ರಂಗ ಸಜ್ಜಿಕೆ ಇತ್ಯಾದಿ ಶೀರ್ಷಿಕೆಯ ಬರೆಹಗಳು ರಂಗಭೂಮಿಯ ನಾಟಕಾವಲೋಕನೆ ಕೃತಿಯಲ್ಲಿ ಗಮನ ಸೆಳೆದಿವೆ. ‘ಈ ಮಾಸದ ನಾಟಕ’ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ. .