ಫಕೀರಪ್ಪ ತಾಳಗುಂದ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದದವರು. ವೃತ್ತಿಯಲ್ಲಿ ಬೆಂಗಳೂರಿನ ಆಚಾರ್ಯ ತಾಂತ್ರಿಕ ಮಹಾವಿದ್ಯಾಲಯ, ಸೋಲದೇವನಹಳ್ಳಿ ಯಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿಇವರೊಬ್ಬ ಕವಿ.. ಲೇಖಕ.. ಸಾಹಿತಿ ಅಷ್ಟೇ ಅಲ್ಲದೆ ಸಾಂಸೃತಿಕ ಚಿಂತಕರು ಕೂಡ. ಸಾಹಿತ್ಯದ ಸವಿ ಅರಿತ ಇವರ ಲೇಖನಿ ಹಲವಾರು ಕಥೆ, ಕವನ, ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವುದರ ಮೂಲಕ ಓದುಗರ ಜಗತ್ತಿಗೆ ತನ್ನದೇ ಕೊಡುಗೆ ನೀಡುತ್ತಾ ಕೊನೆಗೆ ತಮ್ಮ ಲೇಖನಿಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಪುಸ್ತಕದ ಕೊಡುಗೆಯನ್ನು ನೀಡಿರುತ್ತಾರೆ. ಅವರ ಈವರೆಗಿನ ಪ್ರಕಟಿತ ಕೃತಿಗಳು "ದಿಬ್ಬಣ " ಕವನ ಸಂಕಲನ ಜುಲೈ 2018 ರಲ್ಲಿ ಬಿಡುಗಡೆಗೊಂಡಿತ್ತು. ನಂತರ 2019 ರಲ್ಲಿ ಕ್ರಮವಾಗಿ ಎರಡು ಕೃತಿಗಳು " ಆಧುನಿಕ ವಚನಕಾರರು , "ಬಬ್ಬುಳಿ ಪೂವಿನ ಕಂಪಿನೊಳೆ " ಎಂಬ ಸಂಪಾದಕಿಯ ಕೃತಿಗಳು ಹಾಗೆ 2020 ರಲ್ಲಿ"ಕನಸು ಕಂಗಳ ಕುಸುಮಗಳು" ಎಂಬ ಮಕ್ಕಳ ಕವಿತೆಗಳ ಸಂಕಲನವನ್ನು ಲೋಕಾರ್ಪಣೆ ಮಾಡಿದ್ದಾರೆ. " ಮುಕ್ಕಣ್ಣನ ತ್ರಿಪದಿಗಳು " ತ್ರಿಪದಿಗಳ ಸಂಕಲನ ಇವರ ಐದನೆ ಕೃತಿ.