About the Author

ಕನ್ನಡದ ಹಿರಿಯ ಲೇಖಕಿ ಬಾಲ್ಯದಲ್ಲೇ ಸಾಹಿತ್ಯ ರಚನೆಯಲ್ಲಿ ತೊಡಗಿದವರು ನೀಳಾದೇವಿಯವರು 1932 ಆಗಸ್ಟ್ 22 ರಂದು ಮೈಸೂರಿನಲ್ಲಿ ಜನಿಸಿದರು. ಇವರ ಪ್ರಥಮ ಕತೆ  “ಅಪ್ಪಾ ನಾನೂ ಬರ್ತಿನಪ್ಪಾ" ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾದಾಗ ಇವರಿಗೆ 15 ವರ್ಷ. ಕಾದಂಬರಿ, ಕಿರುಗತೆ, ಲಘುಹಾಸ್ಯ, ಶಿಶು ಸಾಹಿತ್ಯ, ನಾಟಕ, ಪ್ರವಾಸ ಕಥನ, ಅನುವಾದಗಳಲ್ಲಿ ಸಮರ್ಥವಾಗಿ ಕೈಯಾಡಿಸಿದ ಹಿರಿಯ ಕಿರುಗತೆಗಳ ಕತೆಗಾರ್ತಿ. ನೀಳಾದೇವಿ, ಅವರ ಅನೇಕ ಕಥಾ ಸಂಗ್ರಹಗಳೂ ಬಂದಿವೆ. ಒಟ್ಟು 40 ಗ್ರಂಥಗಳು. ‘ಬೇಡಿ ಬಂದವಳು’, ಇವರ ಒಂದು ಜನಪ್ರಿಯ ಕಾದಂಬರಿ. ಇದು ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಚಲನಚಿತ್ರವಾಗಿ ತೆರೆ ಕಂಡಿದೆ.

ನೀಳಾದೇವಿಯರ ಕೆಲವು ಸಣ್ಣ ಕಥೆಗಳೂ ತೆರೆ ಕಂಡಿವೆ. ಅವರ ಬರಹಗಳು, ಧಾರಾವಾಹಿಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಕಾಣಬರುತ್ತವೆ. ಒಲವಿನ ಜಾಲ, ಜೀವನ ಹೆಜ್ಜೆ, ಹೊಸಿಲು, ಪ್ಲಾಟ್‌ಫಾರಂ ಮೇಲೆ ಒಂದು ರಾತ್ರಿ, ಮೂಕರಾಗ, ಅನುರಾಧ, ಕಣ್ಣಮುಚ್ಚಾಲೆ, ದುಂಬಿ ತೊರೆಯಾಸೆ, ಕಾಗದದ ಚೂರು, ಅಂತಃಸರಿತೆ, ಅಂತರ, ಕಾಲಮಾನ, ಮುಖವಾಡ, ಮೇಘನಾ, ಬೇರಿಂದ ಫಲಕೆ, ನೀನಾ, ಧನ್ಯ ಹುಲ್ಲು ಹಸಿರಾಯಿತು, ಕಪಿಮುಷ್ಠಿಲಿ ಕಡ್ಲೆಕಾಯಿ ಅವರ ಪ್ರಮುಖ ಕಾದಂಬರಿಗಳು.’ನಾ ಕಂಡ ಆ ಖಂಡ’ ಅವರ ಪ್ರವಾಸ ಕೃತಿಯಾಗಿದೆ. ಅಷ್ಟಲ್ಲದೆ ಮಕ್ಕಳ ಸಾಹಿತ್ಯದಲ್ಲೂ ಕೈ ಆಡಿಸಿದ್ದಾರೆ. ಜೂಟಾಟ ಅವರ ಮಕ್ಕಳ ನಾಟಕವಾಗಿದೆ. ಅವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಅಂಬೇಡ್ಕರ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ,  'ಕಳ್ಳಿಗಿಡದ ಬುಡದಲ್ಲಿ' ಕೃತಿಗೆ ಶೇಷಮ್ಮ ಭಾಸ್ಕರ್‌ರಾವ್ ದತ್ತಿನಿಧಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ 'ಅನುಪಮಾ ಪ್ರಶಸ್ತಿ', ಕುವೆಂಪು ಶ್ರೀ ಪ್ರಶಸ್ತಿ ಲಭಿಸಿದೆ. 'ಸುಧಾ' ಪತ್ರಿಕೆಯ ಕಾದಂಬರಿ ಸರ್ಧೆಯಲ್ಲಿ ಅವರ ’ಕಾಗದದ ಚೂರು’ ಕಾದಂಬರಿಗೆ ಎರಡನೆಯ ಬಹುಮಾನ ಲಭಿಸಿವೆ. ಮಂಡ್ಯದಲ್ಲಿ ನಡೆದ 6ನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷ ಸ್ಥಾನ ಹೊಂದಿದ್ದರು. 2021ರಲ್ಲಿ ಎಸ್.ವಿ. ಪರಮೇಶ್ವರ ಭಟ್ಟರ ಸಂಸ್ಮರಣೆ ಪ್ರಶಸ್ತಿಯೂ ದೊರಕಿದೆ. 

ನೀಳಾದೇವಿ

(15 Aug 1932)