ನಂದೀಶ್ ಬಂಕೇನಹಳ್ಳಿ ಮೂಲತಃ ಮಲೆನಾಡಿನವರು. ಕಲೆ, ಸಾಹಿತ್ಯ, ಇತಿಹಾಸ, ರಾಜಕೀಯ ಎಲ್ಲದರಲ್ಲೂ ನನ್ನೂರು ಸ್ಛಾನ ಪಡೆದಿದೆ ಎನ್ನುವ ಅವರು ಹವ್ಯಾಸಿ ಫೋಟೋಗ್ರಾಫರ್. ಕೊಟ್ಟಿಗೆ ಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿರುವ ನಂದೀಶ್ ಓದು, ಪ್ರಕೃತಿ ವೀಕ್ಷಣೆ, ಕಥೆ-ಕವನ ರಚನೆಯನ್ನು ತಮ್ಮ ಇಷ್ಟದ ಹವ್ಯಾಸವಾಗಿಸಿಕೊಂಡಿದ್ದಾರೆ, ‘ಮುಖವಾಡ’ ಇವರ ಪ್ರಕಟಿತ ಕವನ ಸಂಕಲನ.