ಲೇಖಕ ನಾ. ರೇವನ್ ಮೂಲತಃ ದಾವಣಗೆರೆಯವರು. ದಾವಣಗೆರೆಯಲ್ಲಿ ಕಲಾ ಶಾಲೆ ಆರಂಭಗೊಂಡ ಸಂದರ್ಭದಲ್ಲಿ, ಅವರ 14 ನೇ ವಯಸ್ಸಿನಲ್ಲೇ ಕಲಾ ಶಾಲೆಗೆ ಮಾಡೆಲ್ ಆಗಿ ಕಲಾಭಿರುಚಿ ಬೆಳೆಸಿಕೊಂಡವರು. ನಂತರದ ದಿನಗಳಲ್ಲಿ ಚಿಂದೋಡಿ ಲೀಲಾ ಹಾಗೂ ಆರ್. ನಾಗರತ್ನಮ್ಮ ನೇತೃತ್ವದ ನಾಟಕ ಮಂಡಳಿಗೆ ಸೇರಿ ನಾಟಕ, ಬ್ಯಾನರ್ ಬರೆಯಲು, ವರ್ಣಾಲಂಕಾರ, ಪಾತ್ರ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ದಾವಣಗೆರೆಯಲ್ಲಿ 1974 ರಲ್ಲಿ ಸೃಷ್ಟಿ ಕಲಾ ಶಾಲೆ ಆರಂಭಿಸಿ, ಅನೇಕ ಕಲಾ ಕಾರ್ಯಗಾರ, ಚಿತ್ರ ಕಲಾ ಸ್ಫರ್ಧೆಗಳನ್ನು ನಡೆಸಿದರು. ನಾಗಮ್ಮ ಕೇಶವಮೂರ್ತಿಯವರ ವನಿತಾ ಸಮಾಜದಲ್ಲಿ14 ವರ್ಷ ಕಾಲ ಕಲಾ ಉಪನ್ಯಾಸಕರಾಗಿದ್ದರು. 175 ಕನ್ನಡ ಹಿರಿಯ ಸಾಹಿತಿಗಳ ಭಾವಚಿತ್ರಗಳನ್ನು ಪೆನ್ಸಿಲ್ ನಲ್ಲಿ ಹಾಗೂ ಸುಮಾರು 700 ಕ್ಕೂ ಹೆಚ್ಚು ವ್ಯಂಗ್ಯ ಚಿತ್ರಗಳನ್ನು ರಚಿಸಿದ್ದಾರೆ. 2007 ರಲ್ಲಿ ಲಲಿತ ಕಲಾ ಅಕಾಡೆಮಿ ಸದಸ್ಯರಾಗಿದ್ದರು., ಪ್ರಸ್ತುತ ಕಂಪನಿ ನಾಟಕ, ಹವ್ಯಾಸಿ ನಾಟಕ, ದೊಡ್ಡಾಟ, ಟಿ.ವಿ ಧಾರವಾಹಿ ಹಾಗೂ , ಸಿನಿಮಾಗಳಲ್ಲಿ ಅಭಿನಯ ಹಾಗೂ ರಂಗ ಸಜ್ಜಿಕೆಗೆ ಬೇಕಾದ ಪರಿಕರಗಳ ತಯಾರಿಕಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಕೃತಿಗಳು: ಗಾಂಧಿಮಾರ್ಗ (ಮಕ್ಕಳಿಗಾಗಿ ಸಚಿತ್ರ ಗಾಂಧಿ ಕತೆಗಳು)