About the Author

ಮೇಕನಗದ್ದೆ ಲಕ್ಷ್ಮಣಗೌಡ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮೇಕನಗದ್ದೆಯವರು. ಲಕ್ಷ್ಮಣಗೌಡರು ವೃತ್ತಿಯಿಂದ ವಿಜ್ಞಾನ ಶಿಕ್ಷಕರು. ಪ್ರವೃತ್ತಿಯಿಂದ ಸಾಹಿತ್ಯ ರಚನೆ ಹಾಗೂ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಮಲೆನಾಡಿನ ಹಲವು ಪ್ರಸಿದ್ದ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಬರೆದಿದ್ದು, ಹಲವಾರು ಮನೆತನಗಳ ಗತ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಮಲೆನಾಡಿನ ಸಾಂಸ್ಕೃತಿಕ ಅಧ್ಯಯನ, ಜಾನಪದ ಹಾಗೂ ಶಾಸನಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕದ ಜಾನಪದ ವಿಶ್ವವಿದ್ಯಾಲಯದ ಜಾನಪದ ನಿಘಂಟು ಯೋಜನೆಯ ಜಿಲ್ಲಾ ಮಾಹಿತಿ ಸಂಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು : ಮೂಕ್ತಿಹಳ್ಳಿ ಎಂ.ಆರ್. ಸಣ್ಣಸಿದ್ಧೇಗೌಡರ ಜೀವನಚರಿತ್ರೆ, ಬ್ರಹ್ಮಲಿಂಗೇಶ್ವರನ ಮಡಿಲಲ್ಲಿ, ಊರುಬಗೆ ಸಾವಿರ, ದೇವವೃಂದ, ಮರೆತುಹೋದ ಮಲೆನಾಡಿನ ಚಿತ್ರಗಳು, ಸೂರ್ಯರಶ್ಮಿಗೆ ನಮನ, ಕರುಣೆಯಿಂದಲಿ ಕಾಯೋ, ಒಡಲದನಿ, ಸೃಷ್ಟಿಚತುರನ ವಚನಗಳು(ಕವನ ಸಂಕಲನ), ಮಲೆನಾಡಿನಲ್ಲಿ ಅಜ್ಞಾತವಾಗಿದ್ದ ಹಲವಾರು ಅಪ್ರಕಟಿತ ಶಾಸನಗಳನ್ನು ಪತ್ತೆಹಚ್ಚಿ ಎಪಿಗ್ರಾಫಿಯ ಕರ್ನಾಟಕ ಮಾಲಿಕೆ, ಆಧುನಿಕ ಮೂಡಿಗೆರೆಯ ನಿರ್ಮಾತೃ ಮಾಕೋನಹಳ್ಳಿ ದೊಡ್ಡಪ್ಪಗೌಡ.

ಮೇಕನಗದ್ದೆ ಲಕ್ಷ್ಮಣಗೌಡ