ಬರಹಗಾರ್ತಿ ಮಂಗಳ ಎಂ. ನಾಡಿಗ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನವರು. ಪ್ರಸ್ತುತ ಬೆಂಗಳೂರು ನಿವಾಸಿ.
ಕಥೆ, ಕವನ, ಲೇಖನ, ಚುಟುಕು, ಆಶುಕವನ, ಆಶುಕಥೆ, ಸಂಭಾಷಣೆ, ಶಿಶುಗೀತೆ, ಲಾವಣಿ, ಹಾಸ್ಯ ಬರಹ, ಪ್ರಹಸನ, ಜಾನಪದ ಶೈಲಿಯ ಕವನ ಹೀಗೆ ಎಲ್ಲಾ ವಿಧದ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ವಿನಯವಾಣಿ ದಿನಪತ್ರಿಕೆಯಲ್ಲಿ "ಭಾವವರ್ಷ" ಎಂಬ ಶೀರ್ಷಿಕೆಯಡಿಯಲ್ಲಿ ಅಂಕಣ ಬರಹ, ವಿಶ್ವವಾಣಿ, ಬಿ ಟ್ರೆಂಡ್ಸ್, ಅಪರಂಜಿ ಮಾಸಪತ್ರಿಕೆ, ನಯನ ಮಾಸಪತ್ರಿಕೆ, ಮಂಗಳ ವಾರಪತ್ರಿಕೆ , ಚೆನ್ನೈನ ಲಹರಿ ಪತ್ರಿಕೆ, ರಾಯಚೂರಿನ ಸ್ಟೇಟ್ ಎಕ್ಸ್ಪ್ರೆಸ್ ದಿನಪತ್ರಿಕೆ, ಶಿವಮೊಗ್ಗದ ಅಜೇಯ ಸಂಜೆ ಪತ್ರಿಕೆ, ಭೀಮ ವಿಜಯ ಪತ್ರಿಕೆ, ಸಂಜೆ ತಂತಿ ಪತ್ರಿಕೆ, ಪಾಕ್ಷಿಕ ಇ ಪತ್ರಿಕೆ-ಲೇಖನಿ, ಸುದಿನ ದಿನಪತ್ರಿಕೆ, ಕೋಟೇಶ್ವರ ಮೈತ್ರಿ ತ್ರೈಮಾಸಿಕ ಪತ್ರಿಕೆ, ಡಿಜಿಟಲ್ ಮ್ಯಾಗಝಿನ್ ಶ್ರೀಗಂಧ ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನಗಳು ಹಾಗೂ ಕರ್ಮವೀರ ವಾರಪತ್ರಿಕೆಯಲ್ಲಿ ಹನಿಗವನಗಳು ಪ್ರಕಟವಾಗಿರುತ್ತದೆ.
ಕೃತಿಗಳು: ಸುತ್ತ ಮುತ್ತ(ಲೇಖನಗಳ ಸಂಗ್ರಹ), ಪ್ರೀತಿಯ ಚಿಟ್ಟೆಯ ಬೆನ್ನೇರಿ(ಕವನ ಸಂಕಲನ)