ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಮಾಧವ ಪೆರಾಜೆ ಎಂ.ಎ. ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯ, ಎಂ.ಫಿಲ್ ಹಾಗೂ ಪಿಎಚ್.ಡಿ. ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ದ್ರಾವಿಡ ಸಂಸ್ಕ್ರತಿ ಅಧ್ಯಯನ ವಿಭಾಗ ಅಧ್ಯಾಪಕರಾಗಿರುವ ಅವರು ಕನ್ನಡ ವಿಮರ್ಶೆ, ದೇಸಿ ಸಂಸ್ಕ್ರತಿ ಹಾಗೂ ದ್ರಾವಿಡ ಅಧ್ಯಯನ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ. ಕನ್ನಡ ಭಾಷಾ ಸಾಹಿತ್ಯ, ದ್ರಾವಿಡ ಅಧ್ಯಯನ , ಭಾಷಾ ವಿಜ್ಞಾನ, ಭಾಷಾಂತರ ಅಧ್ಯಯನ ಇವು ಪೆರಾಜೆ ಅವರ ಆಸಕ್ತಿಯ ಕ್ಷೇತ್ರಗಳು. ಪರಿಭಾಷೆ, ತೌಲನಿಕ ದ್ರಾವಿಡ, ಡೆರಿಡಾ, ಪಂಪ ಪೂರ್ವ ಕನ್ನಡ ಕವಿಗಳು, ಪ್ರಾಚೀನ ಕನ್ನಡ ಸಾಹಿತ್ಯವು ಅನುವಾದವೇ? ಇವು ಪ್ರಕಟಿತ ಕೃತಿಗಳು. ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ,(2005,2008) ದೊರೆತಿವೆ. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಯಕ್ಷಗಾನ ಪದಕೋಶ ರಚಿಸಿ, ಪ್ರಕಟಿಸಿದ್ದಾರೆ.