ಕಾದಂಬರಿಗಾರ, ಕತೆಗಾರ ಕುಮಾರ್ ಮೂಲತಃ ಚಾಮರಾಜಪೇಟೆಯವರು. ಹುಟ್ಟಿದ್ದು 1997 ಜನವರಿ 2ರಂದು. ’ಈ ಗ್ಯಾಲಕ್ಸಿ ಬಿಟ್ಟು ಆಚೆ ಹೋಗಿ ಬದುಕುವಷ್ಟು ದೊಡ್ಡವು’ ಎಂದು ತಮ್ಮ ಕನಸುಗಳ ಬಗ್ಗೆ ಹೇಳಿಕೊಂಡಿದ್ದಾರೆ. ’ಪ್ರೇಮ ಖಡ್ಗ’ ಅವರ ಮೊದಲ ಕಾದಂಬರಿ. ’ನಾಗಕೇಸರಿ’ ಅವರ ಮತ್ತೊಂದು ಕಾದಂಬರಿ ಪ್ರಕಟಣೆಗೆ ಸಿದ್ದವಾಗುತ್ತಿದೆ.