ಲಕ್ಷ್ಮಿಶಂಕರ ಜೋಷಿ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಮಣ್ಣೂರಿನವರು. ಗದಗ ಕೆ.ಎಲ್.ಇ ಸಂಸ್ಥೆಯ ಮಹಿಳಾ ಕಾಲೇಜಿನಿಂದ ಪದವಿ, ಕರ್ನಾಟಕ ವಿ.ವಿ.ಯಿಂದ ಎಂ.ಎ.(ಕನ್ನಡ), ಗುಲಬರ್ಗಾ ವಿ.ವಿ.ಯಿಂದ ಸಂಗೀತದಲ್ಲಿ ಎಂ.ಎ, ಹಾಗೂ ಕರ್ನಾಟಕದಲ್ಲಿ ಹಿಂದೂ ಸ್ತಾನಿ ಸಂಗೀತ: ಒಂದು ಅಧ್ಯಯನ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದಿದ್ದಾರೆ.
ಎರಡು ಪ್ರಬಂಧಗಳ ಸಂಕಲನ, ಅಂಕಣ ಬರೆಹಗಳ ಒಂದು ಕೃತಿ, ವೈದ್ಯ ಶಿರೋಮಣಿ-ಕೃತಿಯನ್ನು ಸಂಪಾದಿಸಿದ್ದಾರೆ. ಗುಲಬರ್ಗಾ ವಿ.ವಿ. ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ಅವರು, ಪ್ರಸಾರಾಂಗದಿಂದ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಸಾರಥಿ, ಸ್ವರ ಮಾಧುರಿ ಸೇರಿದಂತೆ ಇತರೆ ಪ್ರಶಸ್ತಿಗಳು ಸಂದಿವೆ. ಸಂಗೀತದಂತೆ ರಂಗಭೂಮಿಯೂ ಇವರ ಕಾರ್ಯಕ್ಷೇತ್ರವಾಗಿದೆ.