ಲಲಿತ ಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದವರು.ತಾಯಿ ಸಂಗೀತಗಾರ್ತಿ ಮತ್ತು ಬರಹಗಾರ್ತಿ,ತಂದೆ ಸರ್ಕಾರಿ ಶಾಲಾ ಶಿಕ್ಷಕರು. ಮದುವೆಯ ನಂತರ ಆಂದ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿ 16 ವರ್ಷ ವಾಸ ಮಾಡಿದ್ದಾರೆ.. ಚಿಕ್ಕ ವಯಸ್ಸಿನಿಂದಲೂ ಬರವಣಿಗೆ ಹವ್ಯಾಸ ಬೆಳೆಸಿಕೊಂಡ ಇವರ ಸಾಹಿತ್ಯ ಸೇವೆಗಾಗಿ ಪ್ರಶಸ್ತಿ ಪತ್ರ.ನೆನಪಿನ ಕಾಣಿಕೆಗಳು ಪಡೆದಿರುತ್ತಾರೆ.
ರಾಷ್ಟ್ರೀಯ ಅಂತರ ರಾಷ್ಟ್ರೀಯ ಅಖಿಲಭಾರತ ಕವಯತ್ರಿಯರ ಸಮ್ಮೇಳನ ಸಂಸ್ಥೆಯಲ್ಲಿ pattern member, Executive ಮಾತ್ರವಲ್ಲದೆ ಬೆಂಗಳೂರು ಝೋನ್ ನ ಅಧ್ಯಕ್ಷರೂ ಆಗಿದ್ದಾರೆ.. ನಾಲ್ಕು ವರ್ಷಗಳು ಕರ್ನಾಟಕದ ಇನ್ಚಾರ್ಜ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನಕ್ಕಾಗಿ, ಗುಲ್ಬರ್ಗ ಬೀದರ್, ಮೈಸೂರು, ಬೆಂಗಳೂರು ಅಲ್ಲದೆ ಹೊರ ರಾಜ್ಯಗಳಾದ ಚಂಡೀಘರ್, ಅಹಮದಾಬಾದ್, ತಿರುವನಂತಪುರ, ಅಸ್ಸಾಂ ಮತ್ತು ಮೇಘಾಲಯ ರಾಜ್ಯದ ಸಮ್ಮೇಳನಕ್ಕಾಗಿ ಎರಡು ಸಾರಿ ಷಿಲ್ಲಾಂಗ್ ಗೆ ಭೇಟಿ ನೀಡಿ ಕಾರ್ಯಕ್ರಮಗಳಲ್ಲಿ ವಿಷಯ ಮಂಡನೆ, ಕವನ ವಾಚನ ಮಾಡಿದ್ದಾರೆ. 2019 ಜುಲೈ ತಿಂಗಳಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಅಖಿಲಭಾರತ ಕವಯಿತ್ರಿ ಸಮ್ಮೇಳನದಿಂದ ಕರ್ನಾಟಕದ ರೂವಾರಿಯಾಗಿ ಲಂಡನ್ ಮತ್ತು ಯುರೋಪ್ 12 ದೇಶಗಳ ಪ್ರವಾಸ ಮಾಡಿದ್ದಾರೆ. ಯುರೋಪ್ ನ ರೋಮ್ ನಗರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಟ್ಟು,ಪ್ರತಿಷ್ಠಿತ ಮಿನರ್ವ ಅವಾರ್ಡ್ ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ. ಈ ಸಂಸ್ಥೆಯ ಕಾರ್ಯಕ್ರಮದಲ್ಲಿ ಅವರ ಕೃತಿ "ಮಳೆಬಿಲ್ಲು" ಎಂಬ ಕನ್ನಡ ಪುಸ್ತಕ ಲಂಡನ್ ಮತ್ತು ರೋಮ್ ನಲ್ಲಿ ಅನಾವರಣಗೊಂಡಿದೆ. ಅಲ್ಲದೆ ಈ ಕೃತಿ ಪ್ಯಾರಿಸ್ ಇಂಡಿಯನ್ ಲೈಬ್ರರಿಯಲ್ಲಿ ಸೇರ್ಪಡೆಯಾಗಿದೆ.
2019 ಜುಲೈನಲ್ಲಿ ನವೆಂಬರ್ ನಲ್ಲಿ ಅಸ್ಸಾಂ ರಾಜ್ಯದ ತೇಜ್ಪುರ್ ಕಾರ್ಯಕ್ರಮದಲ್ಲಿ ಇವರ "ಯುರೋಪ್ ಪ್ರವಾಸ ಕಥನ " ಪುಸ್ತಕ ಬಿಡುಗಡೆಯಾಗಿದೆ. 2020 ಫೆಬ್ರವರಿಯಲ್ಲಿ ಮೂರನೆಯ ಪುಸ್ತಕ 27 ಪ್ರಬುದ್ದ ಲೇಖಕಿಯರು ಅವರವರ ತಾಯಂದಿರಿಗೆ ಬರೆದಂತಹ ಲೇಖನಗಳ ಸಂಪಾದಕತ್ವದ "ಕುಸುಸುಮಾಂಜಲಿ" ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸಂಧರ್ಭದಲ್ಲಿ ಗುಲ್ಬರ್ಗದಲ್ಲಿ ಬಿಡುಗಡೆ ಮಾಡಿದ್ದಾರೆ. ಸಾಹಿತ್ಯ,ಬರಹಗಾರ್ತಿ,ಸಾಮಾಜಿಕ ಕಳಕಳಿ,ಮಹಿಳಾ ಅಸ್ಮಿತೆ ಪ್ರಕೃತಿ ಸೌಂದರ್ಯ, ಪ್ರವಾಸಗಳು,ಲಲಿತ ಪ್ರಬಂಧಗಳು ನ್ಯಾನೊಕಥೆಗಳು, ಹೀಗೆ ಸಾಹಿತ್ಯದ ಎಲ್ಲ ಪ್ರಕಾರದ ಬರಹಗಳನ್ನು ಬರೆಯುತ್ತಾರೆ. ಈವರೆಗೆ 1300 ಕವನಗಳು ಮತ್ತು ಸಮಾರು1500ರ ಮೇಲೆ ಲೇಖನಗಳನ್ನು ಬರೆದಿದ್ದಾರೆ. ಭಾರತದ ವಿವಿಧ ರಾಜ್ಯದ ಪ್ರಶಸ್ತಿಯು ಸೇರಿದಂತೆ ಯುರೋಪ್ ನಲ್ಲಿ "ಮಿನರ್ವ ಅವಾರ್ಡ್" ಮತ್ತು 2021ರಲ್ಲಿ ಬೆಂಗಳೂರಿನ ಕಾಶ್ಮೀರಿ ಸಂಗಮ್ ಲ್ಲಿ ಉತ್ತರ ಭಾರತದ ಹಿಂದಿ ಭಾಷಾ ಸಂಸ್ಥೆಯ ಕಾರ್ಯಕ್ರಮದಲ್ಲಿ "ಕೊರೋನಾ ಸಮಯದಲ್ಲಿ ಸಾಹಿತ್ಯಿಕ ಬೆಳವಣಿಗೆ" ಎಂಬ ವಿಶಯದ ಬಗ್ಗೆ ಕನ್ನಡದಲ್ಲಿ ವಿಷಯ ಮಂಡನೆ ಮಾಡಿದ್ದು ನಮ್ಮ ಕನ್ನಡದ ಸಾಹಿತ್ಯಕ್ಕಾಗಿ ಪ್ರಶಸ್ತಿ ಪರಸ್ಕಾರ ದೊರಕಿದೆ.
ಕೃತಿಗಳು:ಮಳೆಬಿಲ್ಲು(ಬಹುರೂಪಿ ಲೇಖನಗಳ ಸಂಕಲನ), ಯುರೋಪ್ ಪ್ರವಾಸ ಕಥನ , ಕುಸುಮಾಂಜಲಿ, ಉತ್ತರ ದೃವದಿಂ ದಕ್ಷಿಣ ದೃವಕು..