ಕನ್ನಡದ ಅತ್ಯತ್ತಮ ಸ್ತ್ರೀ ಚಿಂತಕಿ, ಬರಹಗಾರ್ತಿಯರಲ್ಲಿ ಒಬ್ಬರು ಕುಸುಮಾ ಶಾನಭಾಗ. ಪತ್ರಕರ್ತೆ, ಬರಹಗಾರ್ತಿ ಅವರು ಮೂಲತಃ ಕೊಡಗಿನವರು. ಪ್ರಜಾವಾಣಿ ದಿನಪತ್ರಿಕೆ ಉದ್ಯೋಗಿಯಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದಿರುವ ಇವರು ಲೈಂಗಿಕ ಕಾರ್ಯಕರ್ತರ ಕುರಿತು ಸುಮಾರು ಹತ್ತು ವರ್ಷಗಳಿಗೂ ಹೆಚ್ಚುಕಾಲ ಅಧ್ಯಯನ ನಡೆಸಿದ್ದಾರೆ. “ನೆನಪುಗಳ ಬೆನ್ನೇರಿ”ಎಂಬ ಕಥಾಸಂಕಲನವನ್ನು ಹೊರತಂದಿದ್ದಾರೆ. ನವಕರ್ನಾಟಕ ಪ್ರಕಾಶನದ ವನಿತಾ ಚಿಂತನ ಮಾಲೆಯಿಂದ ಹೊರಬಂದ ಕುಸುಮಾ ಶಾನುಭಾಗರ ’ಮಣ್ಣಿಂದ ಎದ್ದವರು’ ಎಂಬ ವಿಶಿಷ್ಟ ಕಾದಂಬರಿ , ಸ್ತ್ರೀ ಸಮುದಾಯದ ಒಳಕಾಳಜಿಗಳ ಒಟ್ಟಾರೆ ಆಳ ಮತ್ತು ಅಗಲವನ್ನು ತೆರೆದಿಡುವ ಕೌಟುಂಬಿಕ ವಿಸ್ತಾರದ ಸುದೀರ್ಘ ಬರವಣಿಗೆಯ ತಾಜಾ ಕೃತಿಯಾಗಿದೆ. ’ಕಾಯದ ಕಾರ್ಪಣ್ಯ’ ಲೈಂಗಿಕ ಕಾರ್ಯಕರ್ತೆಯರ ಕುರಿತ ಕಥನವಾಗಿದೆ. ಇವರ ಬರಹಗಳು ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ.