ಲೇಖಕ ಖಾಜಾಹುಸೇನ್ ಅವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆನೆಹೊಸೂರುನಲ್ಲಿ 1968 ಜುಲೈ 01 ರಂದು ಜನಿಸಿದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿದ್ದಾರೆ.
ವೈಚಾರಿಕ ಲೇಖನ ಸೇರಿದಂತೆ ನಾಟಕ, ಕತೆ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ‘ಚಿಂತನೆಯ ಚಿಲುಮೆ’ ಅವರ ವೈಚಾರಿಕ ಲೇಖನ ಪುಸ್ತಕ 2015ರಲ್ಲಿ ಪ್ರಕಟಣೆ ಕಂಡಿತು. ಹಸಿರೇ ಉಸಿರು, ಸಾಲ ಮುಗಿಯದ ಬಾಲ, ದ್ವೇಷ ಅಳಿಸಿ ದೇಶ ಉಳಿಸಿ, ಧರ್ಮಕ್ಕಿಂತ ದೇಶ ದೊಡ್ಡದು ಅವರ ಗಮನಾರ್ಹ ಕೃತಿಗಳು. ಅವರ ಹಲವಾರು ಕಥೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.