ಖಾದ್ರಿ ಶಾಮಣ್ಣ ಅವರ ಜನನ 6 ಜೂನ್, 1925 - ಮೇಲುಕೋಟೆಯ ವೈದಿಕ ಪರಿವಾರದಲ್ಲಿ, ಆರಂಭದ ಶಿಕ್ಷಣ ಊರಿನಲ್ಲಿ, ಆನಂತರ ಮೈಸೂರಿಗೆ ಹೆಚ್ಚಿನ ಶಿಕ್ಷಣಕ್ಕಾಗಿ, ಸೀನಿಯರ್ ಇಂಟರ್ಗೆ ಬರುವ ವೇಳೆಗೆ ರಾಮಕೃಷ್ಣ - ಸ್ವಾಮಿ ವಿವೇಕಾನಂದರ ಪ್ರಭಾವದ ತೆಕ್ಕೆಯಲ್ಲಿ ಎಳೆಯ ಖಾದ್ರಿ, ರಾಷ್ಟ್ರೀಯ ಸಂಗ್ರಾಮ ಕೈಬೀಸಿ ಕರೆಯಿತು. 1942 ರ ಚಲೇಜಾವ್ ಚಳವಳಿಯಲ್ಲಿ ಸಕ್ರಿಯ ವಿದ್ಯಾರ್ಥಿಯಾಗಿದ್ದರು. ಹೋರಾಟದ ಕಲಿಗಳನೇಕರ ನಿಕಟ ಸಂಪರ್ಕವಿದ್ದ ಖಾದ್ರಿಯವರು ಸ್ವಾತಂತ್ರ್ಯ ಸಮರದ ಕಾಲದಲ್ಲಿ ಎರಡುಸಲ ಜೈಲಿಗೆ ಹೋಗಿದ್ದರು. ಸ್ವರಾಜ್ಯ ಬಂದಮೇಲೂ ಈ ಪರಂಪರೆ ನಿಲ್ಲಲಿಲ್ಲ, 3 ಬಾರಿ ಮತ್ತೆ ಸೆರೆವಾಸ, ಪ್ರಸಿದ್ಧ ಕಾಗೋಡು ಸತ್ಯಾಗ್ರಹದಲ್ಲಿ ಸಕ್ರಿಯ. ಗಾಂಧಿ - ವಿನೋಬಾ - ಜೆ. ಪಿ. - ಲೋಹಿಯಾ ವಿಚಾರಧಾರೆ ಕರಗತ ಮಾಡಿಕೊಂಡ ಇವರು ಜೆ. ಪಿ. - ಲೋಹಿಯಾ ಅವರ ಜತೆ ಅತಿ ನಿಕಟ ಸಂಬಂಧ ಹೊಂದಿದ್ದರು, ಅವರ ವಿಚಾರಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸಿದ ಸಿದ್ಧಹಸ್ತನೆಂಬ ಪ್ರಸಿದ್ದಿ ಇವರಿಗಿದೆ. ರಾಜಕಾರಣ - ಸಮಾಜವಾದೀ ಪಕ್ಷ ಸಂಘಟನೆಯಲ್ಲಿ ಹೆಸರು ಮಾಡಿ, ಪ್ರಥಮ ಲೋಕಸಭೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಠೇವಣಿ ಉಳಿಸಿಕೊಂಡವರು. ಪತ್ರಿಕೋದ್ಯಮದ ನಂಟಸ್ತನದಿಂದಾಗಿ 1944 ರಲ್ಲಿ ’ಜನವಾಣಿ' ದೈನಿಕದಲ್ಲಿ ಉಪಸಂಪಾದಕರಾಗಿ ಸೇರಿಕೊಂಡರು.: 1945-46ರಲ್ಲಿ ಸೇವಾಗ್ರಾಮದಲ್ಲಿದ್ದಾಗ ಕನ್ನಡದ ಅನೇಕ ಪತ್ರಿಕೆಗಳಿಗೆ ವರದಿಗಾರ, 1946-48 ರಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹಿಂತನದಲ್ಲಿ ಸಮಾಜವಾದಿ ಪಕ್ಷದ ' ಜಾಗೃತಿ ' ಸಾಪ್ತಾಹಿಕದ ಸಂಪಾದಕರಾದವರು. 1948-50ರಲ್ಲಿ ಪ್ರಜಾವಾಣಿಯ ಸುದ್ದಿ ಸಂಪಾದಕದ ಇವರು, ಅನಂತರ, ಜಂಟಿ ಸಂಪಾದಕರಾದರು. 1950-60ರ ಅವಧಿಯಲ್ಲಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದು, ಮೈಸೂರಿನ ಗಾಂಧೀಗ್ರಂಥ ಮಲೆಯಲ್ಲಿ ಮಹಾತ್ಮರ ಕೃತಿಗಳ ಕನ್ನಡ ಅನುವಾದಕಾರ-ಸಹಾಯಕ ಸಂಪಾದಕರಾಗಿ ಸೇವೆ ಮಾಡಿದರು, 1960-63 ಮತ್ತೆ ಬೆಂಗಳೂರಿಗೆ ಬಂದು " ಸಂಯುಕ್ತ ಕರ್ನಾಟಕ'ದ ಸುದ್ದಿ ಸಂಪಾದಕರ ಹುದ್ದೆಯನ್ನು ಅಲಂಕರಿಸಿದರು. , 1974ರ ಕೊನೆಯಿಂದ 1978 ರ ಏಪ್ರಿಲ್ ತನನ ಸಂಯುಕ್ತ ಕರ್ನಾಟಕ' ಪತ್ರಿಕಾ ಬಳಗದ ಪ್ರಧಾನ ಸಂಪಾದಕ, ಜುಲೈ 1978 ರಿಂಧ 1990ರ ಮೇ 11ರ ವರೆಗೆ " ಕನ್ನಡಪ್ರಭ' ದ ಸಂಪಾದಕ ಕನ್ನಡ ಪತ್ರಿಕೋದ್ಯ ದಿಗ್ಗಜ ಇತಿಹಾಸ ಪುಟ ಸೇರುವವರೆಗೆ. ಸಂಪಾದಕೀಯ, ಅಗ್ರಲೇಖನ, ಮುಖಪುಟ ಸಂಪಾದಕೀಯಗಳಿಗೆ ಎತ್ತಿದಕ್ಕೆ ಖಾದಿ ಶಾಮಣ್ಣ, ಅಗ್ರಲೇಖನವನ್ನು ಮುಖಪುಟಕ್ಕೆ ತಂದು ಸಾಮಾನ್ಯ ಓದುಗರ ಸಂಪಾದಕೀಯ ಓದುವಂತೆ ಮಾಡಿ ಆ ಅಂಕಣಕ್ಕೆ ಬಲತಂದು ಕೊಟ್ಟರು ಖಾದ್ರಿ. ಅವರ ವ್ಯಕ್ತಿಚಿತ್ರಗಳು ಚಿತ್ರಾಕರ್ಷಕ, ದಿಟವಾಗಿಯೂ ಬಹುಶ್ರುತ ವ್ಯಕ್ತಿತ್ವ. ಕನ್ನಡ ಪತ್ರಿಕೋದ್ಯಮವನ್ನು ಸಂಪನ್ನಗೊಳಿಸಿದರು. ಪತ್ರಿಕಾರಂಗದಲ್ಲಿ ಮೂಡುತ್ತಿದ್ದ ಹೊಸ ಹೊಸ ಅನ್ವೇಷಣೆಗಳಿಗೆ ಲಗುಬಗೆಯಿಂದ ಸ್ಪಂದಿಸಿ ಸಂಭ್ರಮಿಸಿದರು. ಜೀವನದಲ್ಲಿ ಶಿಸ್ತಿಗೆ, ಚೊಕ್ಕಟತನಕ್ಕೆ ಆದ್ಯತೆ ಕೊಡುವ ಖಾದ್ರಿಯವರು, 'ಪ್ರಜಾವಾಣಿ' ಪತ್ರಿಕೆಯಲ್ಲಿದ್ದಾಗ ಇಂಗ್ಲೆಂಡಿನ ಕಾರ್ಡಿಪ್ನಲ್ಲಿರುವ ಪ್ರತಿಷ್ಠಿತ ಥಾಂಸನ್ ಪ್ರತಿಷ್ಠಾನದಲ್ಲಿ ಪತ್ರಿಕೋದ್ಯಮ ಬೋಧನಾ ವಿಷಯದಲ್ಲಿ ವಿಶೇಷ ತರಬೇತಿ ಪಡೆದರು. ರಾಜ್ಯದ ವಿಶ್ವವಿದ್ಯಾನಿಲಯಗಳ, ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ವಿಭಾಗಗಳ ಜತೆ ನಿಕಟ ಸಂಪರ್ಕ ಹೊಂದಿದ್ದರು. ಗಾಂಧೀ ಅರ್ಥ ವಿಚಾರ, ರಾಜನೀತಿ, ಭೂದಾನಯಜ್ಞ ಸಮಗ್ರದರ್ಶನ, ಜಾನ್ ಎಫ್. ಕೆನಡಿ, ಅಮೆರಿಕದ ಕಾರ್ಮಿಕ ವರ್ಗದ ಕತೆ, ವಿನೋಬಾ ಕಂಡ ಗಾಂಧೀ,ಬರೋಡ ಡೈನಮೈಟ್ ಸಂಚು, ರಾಮಮನೋಹರ ಲೋಹಿಯಾ, ಇವರಿಂದ ರಚಿತ -ಅನುವಾದಗೊಂಡ ಕೃತಿಗಳು. 1984 ರಲ್ಲಿ ರಾಜ್ಯ ವಿಧಾನಪರಿಷತ್ತಿಗೆ ಖಾದ್ರಿ ಶಾಮಣ್ಣನವರ ನಾಮಕರಣ ಮಾಡಲಾಗಿದ್ದು, ಅವರ ನಾಡಸೇವೆಗೆ “ಆಸ್ಥಾನ' ದಿಂದ ಸಂದಗೌರವವಾಗಿದೆ.ರಾಜ್ಯೋತ್ಸವ ಪ್ರಶಸ್ತಿ ಸಹ ಲಭ್ಯವಾಗಿದ್ದು, ಸ್ವಾತಂತ್ರ್ಯ ಹೋರಾಟದ ಕುರುಹಾಗಿ ತಾಮ್ರಪತ್ರ ನೀಡಿ ಗೌರವಿಸಲಾಗಿದೆ.