ಲೇಖಕಿ ಡಾ. ಕಸ್ತೂರಿ ದಳವಾಯಿ ಅವರು ಗದಗ ಜಿಲ್ಲೆಯ ಅಣ್ಣಿಗೆರಿಯವರು. ಪಿಯುಸಿವರೆಗೆ ಅಣ್ಣಿಗೆರೆಯಲ್ಲೇ ಶಿಕ್ಷಣ, ಗದಗಿನಲ್ಲಿ ಬಿ.ಎ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರು. ‘ಬೋಳುವಾರು ಮಹಮ್ಮದ್ ಕುಂಯ್ ಕಥೆಗಳು’ ವಿಷಯವಾಗಿ ಎಂ.ಫಿಲ್ ಪಡೆದರು. ಪಿಎಚ್ ಡಿ (2006) ಪದವೀಧರರು. ಸದ್ಯ ಗದಗ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕನ್ನಡ ಸಹ ಪ್ರಾಧ್ಯಾಪಕರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಕೃತಿಗಳು: ಕಥೆ-ಕಾದಂಬರಿಗಳಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನಾತ್ಮಕ ಲೇಖನಗಳ ಸಂಗ್ರಹ)
ಪ್ರಶಸ್ತಿ-ಪುರಸ್ಕಾರಗಳು: ಹುಬ್ಬಳ್ಳೀ ಬಳಿಯ ಬಂಡಿವಾಡದ ಶ್ರೀ ಮಾಧವಾನಂದ ಸದ್ಭಕ್ತ ಮಂಡಳಿಯಿಂದ ‘ಡಾ. ಜಿ.ಎಂ. ನಾಗಯ್ಯ ಅತ್ಯುತ್ತಮಯುವ ಸಂಶೋಧಕಿ’ ಪ್ರಶಸ್ತಿ ಲಭಿಸಿದೆ.