ಕವಿ-ಲೇಖಕ ಕಾ.ಹು ಚಾನ್ ಪಾಷ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಕೋಲಾರದ ಆಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರು. ತೆಲುಗು ಭಾಷೆಯಿಂದ ಕನ್ನಡಕ್ಕೆ ಹಲವಾರು ಕತೆ, ಕವನಗಳನ್ನು ಅನುವಾದ ಮಾಡಿದ್ದಾರೆ.
ಕೃತಿಗಳು: ಮನದ ಮಲ್ಲಿಗೆ(ಚುಟುಕು ಸಂಕಲನ), ಜನ ಮರುಳೋ! ಜಾತ್ರೆ ಮರುಳೋ (ಕಥಾ ಸಂಕಲನ), ಭಲೇ! ಗಿಣಿರಾಮ’, ಮೂರು ವರಗಳು (ಮಕ್ಕಳ ನಾಟಕ), ಸಲೀಂ ಅವರ ಕತೆಗಳು (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಸಾಹಿತಿ ಸಲೀಂ ಅವರ ಸಮಗ್ರ ಕತಾ ಸಾಹಿತ್ಯದಲ್ಲಿನ ಮುಸ್ಲಿಂ ಸಂವೇದನೆಯ ಕತೆಗಳು)
ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ಚುಟುಕು ಕವಿ ಶ್ರೇಷ್ಠ ಪ್ರಶಸ್ತಿ.