ಸಂಶೋಧಕ ಕೆ. ಶಶಿಕಾಂತ ಅವರು ಮೂಲತಃ ರಾಯಚೂರ ಜಿಲ್ಲೆಯ ಲಿಂಗಸೂಗೂರಿನ ಕಸಬಾ ಲಿಂಗಸೂಗೂರು ಗ್ರಾಮದವರು. ಕಾಡ್ಲೂರು ಇವರ ಮನೆತನದ ಹೆಸರು. ಎಂ.ಎ., ಪಿ.ಎಚ್.ಡಿ ಪದವೀಧರರು. ಸದ್ಯ ಲಿಂಗಸೂಗೂರಿನ ಶ್ರೀಸಂಗಮೇಶ್ವರ ಕಲಾ ಮತ್ತು ಬಿ.ಬಿ.ಎಂ. ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಸಂಪಾದನೆ, ಕಾವ್ಯ, ಸಂಶೋಧನೆ, ವಿಮರ್ಶೆ, ವಚನ ಸಾಹಿತ್ಯ ಸಂಪಾದನೆ ಇವರ ಆಸಕ್ತಿಯ ಕ್ಷೇತ್ರಗಳು.
ಕೃತಿಗಳು: ಪ್ರಿಯದರ್ಶಿನಿ (ಸಂಶೋಧನಾ ಲೇಖನಗಳ ಸಂಪಾದನೆ), ನಮ್ಮ ಮಠಗಳ ನಿಕಷ (ಸಂಶೋಧನೆ-2000), ಘನಮಠದಾರ್ಯರ ತತ್ವಪದಗಳು,(ಎಂ.ಫಿಲ್., ಕಿರುಪ್ರಬಂಧ), ದಾಸೋಹ ಸ್ಮರಣ ಸಂಚಿಕೆ, ಷಡಕ್ಷರ ಅಭಿನಂದನ ಗ್ರಂಥ, ಚಿಜ್ಯೋತಿ-ಸ್ಮರಣ ಸಂಚಿಕೆ, ಘನಮಠ ಶಿವಯೋಗಿಗಳ ಸ್ವರವಚನ, ಸ್ವರ್ಣಪ್ರಭೆ, ಚೆಂಬೆಳಕು(ಸಂಪಾದನೆ), ಇಟಗಿ ಮಹಾದೇವ ದೇವಾಲಯ, ಗುಡಗುಂಟಿ ಅಮರೇಶ್ವರ, ಲಿಂಗಸೂಗೂರು ತಾಲೂಕು ದರ್ಶನ, ಶ್ರೀವೀರಭದ್ರೇಶ್ವರ ದೇವರು(ಇತಿಹಾಸ), ಅವ್ವ ಹಾಡಿದ ಕಾಳಿಂಗರಾಯರ ಹಾಡು(ಈ ಕೃತಿಗೆ ಬೊಮ್ಮಾಯಿ ಪ್ರತಿಷ್ಠಾನದ ಜಾನಪದ ಸಿರಿ ಪ್ರಶಸ್ತಿ ಬಂದಿದೆ) ಜನಪದ ಕಥನ ಕಾವ್ಯ, ಉರಿಯುಂಡ ಒಡಲು(ಕಾವ್ಯ) ಅವರ ಪ್ರಮುಖ ಕೃತಿಗಳು.