ಕೆ. ಎಸ್. ನಳಿನಿ ಅವರು ಮೂಲತಃ ಕುಶಾಲನಗರ ತಾಲೂಕಿನ ಕಣಿವೆ ಎಂಬ ಗ್ರಾಮದವರು. ತಂದೆ ಎನ್. ಸುಬ್ಬರಾಯ ಸುಬ್ಬಲಕ್ಷ್ಮಮ್ಮ ತಾಯಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಣಿವೆಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ತಿಪಟೂರು ಹಾಗು ಕುಶಾಲನಗರದ ಫಾತಿಮಾ ಶಾಲೆಯಲ್ಲಿ ಪೂರ್ಣಗೊಳಿಸಿದರು. ಹಾಸನಕಾಲೇಜಿನಲ್ಲಿ ಹಿಂದಿಯಲ್ಲಿ ಬಿ. ಎ. ಬಿಎಡ್ ಪದವಿಯನ್ನು ಮುಗಿಸಿ 1985 ರಲ್ಲಿ ಶಿಕ್ಷಕಿಯಾಗಿ ಸರಕಾರಿ ಶಾಲೆ ತೊರೆನೂರಿನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಹೊಸಕೋಟೆ ಪ್ರೌಢ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ನಿಯೋಜನೆಗೊಂಡು, ನಿವೃತ್ತಿ ಹೊಂದಿದ ನಂತರ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಅಂದಾಜು 90 ರಷ್ಟು, ಅಂತರ್ಜಾಲದಲ್ಲಿ ಕವನ ಮತ್ತು ಕಥೆಗಳ ಬರೆದಿರುತ್ತಾರೆ.