ವೃತ್ತಿಯಿಂದ ರೇಡಿಯಾಲಜಿಸ್ಟ್ ಆಗಿರುವ ಡಾ. ಜೋಯಿಸ್ ಉಪೇಂದ್ರ ಕುಮಾರ ಅವರು ಮೂಲತಃ ಹೊಸಪೇಟೆಯವರು. ಬೆಂಗಳೂರಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿದರು. ನಂತರ ಅವರು 5 ವರ್ಷ ಕಾಲ ಭಾರತೀಯ ಸೇನೆಯಲ್ಲಿ ಮೇಜರ್ ಶ್ರೇಣಿಯ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನಲ್ಲಿಯ ವಾಯುಸೇನೆಯ ಕಮಾಂಡ್ ಆಸ್ಪತ್ರೆಯಲ್ಲಿ ರೇಡಿಯಾಲಜಿ ಕೋರ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನ ರೇಡಿಯಾಲಜಿ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದಾರೆ.
ಗಾಯನ, ಬರೆಹ, ಚೆಸ್ ಆಡುವುದು, ಪ್ರವಾಸ ಇವರ ಹವ್ಯಾಸಗಳು.ಕನ್ನಡ ಸಾಹಿತ್ಯ ಓದು ನಿರಂತರವಾಗಿದ್ದು, ಇವರ ಮೊದಲ ಆಂಗ್ಲ ಕಾದಂಬರಿ-ಗಾಡ್ ಈಸ್ ಗ್ರೇಟ್: ಸೈನ್ಸ್ ಸ್ಪಿರಿಚುವ್ಯಾಲಿಟಿ ಲವ್’